HomePage_Banner_
HomePage_Banner_
HomePage_Banner_

ಕೆ.ವಿ.ಜಿ. ಡೆಂಟಲ್ ಕಾಲೇಜಿನ 27 ನೇ ಬ್ಯಾಚ್ ನ ಬಿ.ಡಿ.ಎಸ್. ಕೋರ್ಸ್ ನ ಉದ್ಘಾಟನಾ ಸಮಾರಂಭ

Advt_NewsUnder_1

KVG Dental college Ist BDS opening ceramani 5 copy

ಕೆ.ವಿ.ಜಿ. ಡೆಂಟಲ್ ಕಾಲೇಜಿನ 27ನೇ ಬ್ಯಾಚ್ ನ ಬಿ.ಡಿ.ಎಸ್. ಕೋರ್ಸ್ ನ ಉದ್ಘಾಟನಾ ಸಮಾರಂಭ ಸೆ. ೧೮ ರಂದು ಸುಳ್ಯದ ಡಾ. ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಮಾರಂಭವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೆ.ವಿ.ಜಿ. ಡೆಂಟಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಕಾಲೇಜಿನ ಬಗ್ಗೆ ಮಾಹಿತಿ ನೀಡಿದರು. ಕೆ.ವಿ.ಜಿ. ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪಡ್ಡಂಬೈಲು ವೆಂಕಟ್ರಮಣ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ವಿಭಾಗ ಮುಖ್ಯಸ್ಥರುಗಳಾದ ಪಿ.ಜಿ. ಸ್ಟಡೀಸ್ ನಿರ್ದೇಶಕ ಡಾ. ಶರತ್ ಕುಮಾರ್ ಶೆಟ್ಟಿ, ವಿಭಾಗಗಳಾದ ಡಾ. ಸವಿತಾ ಸತ್ಯಪ್ರಸಾದ್, ಡಾ. ದಯಾಕರ್ ಎಂ.ಎಂ, ಡಾ. ಕೃಷ್ಣಪ್ರಸಾದ್, ಡಾ. ಪ್ರಣವ್ ಮೋದಿ, ಡಾ ನುಸ್ರತ್ ಫರೀದ್, ಡಾ. ಹರಿಶ್ಚಂದ್ರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಭಾಗ ಮುಖ್ಯಸ್ಥರಾದ ಡಾ. ರಾಮರಾಜ್ ಪಿ.ಎನ್. ಸ್ವಾಗತಿಸಿ, ಡಾ. ಜಯಪ್ರಸಾದ್ ಆನೆಕಾರ ವಂದಿಸಿದರು. ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ. ಮತ್ತು ಡಾ. ನರ್ಮತಾ ಕಾರ್ಯಕ್ರಮ ನಿರೂಪಿಸಿದರು. ಕೆ.ವಿ.ಜಿ. ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ನೂತನ ಬ್ಯಾಚ್‌ನ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ 27ನೇ ಬ್ಯಾಚ್ ಇದಾಗಿದ್ದು ಶೆ. 100 ದಾಖಲಾತಿಯಾಗಿರುವುದಕ್ಕೆ ಡಾ. ರೇಣುಕಾಪ್ರಸಾದ್ ಹರ್ಷ ವ್ಯಕ್ತಪಡಿಸಿದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.