HomePage_Banner_
HomePage_Banner_
HomePage_Banner_

ಸೆ.20ರಿಂದ 30ರ ವರೆಗೆ : ಕೇರ್ಪಡ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.20ರಂದು ‘ಅಮ್ಮನೆಡೆ ನಮ್ಮ ನಡೆ’ ಪಾದಯಾತ್ರೆ

Suddi logo copy

ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾ ನದಲ್ಲಿ ಪೂರ್ವ ಸಂಪ್ರದಾಯದಂತೆ ಸೆ.೨೦ ರಿಂದ ಸೆ.೩೦ರವರೆಗೆ ವಿವಿಧ ಧಾರ್ಮಿಕ ಕಾರ‍್ಯಗಳೊಂದಿಗೆ ನವರಾತ್ರಿ ಉತ್ಸವ ನಡೆಯಲಿದೆ.
ಪ್ರತಿದಿನ ಸರ್ವಸೇವೆ, ರಂಗ ಪೂಜೆ, ಮಾಮೂಲು ರಂಗ ಪೂಜೆ, ವಿವಿಧ ಸೇವೆಗಳು, ಪ್ರತಿ ದಿನ ಸಂಜೆ ಭಜನಾ ಕಾರ‍್ಯಕ್ರಮ, ಮಧ್ಯಾಹ್ನ, ರಾತ್ರಿ ಅನ್ನಸಂತಪಣೆ ನಡೆಯುವುದು. ಸೆ.೨೦ರಂದು ಅಲೆಕ್ಕಾಡಿ ಅಂಗನವಾಡಿ ಪುಟಾಣಿಗಳಿಂದ
ಸಾಂಸ್ಕೃತಿಕ ವೈಭವ, ೨೧ರಂದು ಎಡಮಂಗಲ ಲಕ್ಷ್ಮಣ ಆಚಾರ್ಯ ನಿರ್ದೇಶನದಲ್ಲಿ ಕದಂಬ ಕೌಶಿಕ್ ಎಂಬ ಯಕ್ಷಗಾನ ಬಯಲಾಟ, ಸೆ.೨೨ರಂದು ಸಂಜೆ ಕಾಣಿಯೂರು ಕಣ್ವಶ್ರೀ ಕಲಾಕೇಂದ್ರದ ಮಕ್ಕಳಿಂದ ನೃತ್ಯ ನಿನಾದ ಸೆ.೨೩ರಂದು ಸಂಜೆ ಕಳತ್ತಜೆ ಜಯರಾಜ್ ಆಚಾರ್ಯರಿಂದ ನವರಾತ್ರಿ ಮಹೋತ್ಸವದ ಮಹತ್ವ ಧಾರ್ಮಿಕ ಉಪನ್ಯಾಸ ಸೆ.೨೪ರಂದು ಕಡಮಜಲು ಸುಭಾಶ್ ರೈ ಯವರಿಂದ ಸಾಮಾಜಿಕ ಬದುಕು-ಧಾರ್ಮಿಕ ಪರಿಪಾಲನೆ ಧಾರ್ಮಿಕ ಉಪನ್ಯಾಸ, ಎಣ್ಮೂರು ಕಲಾಮಾಯೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು. ಸೆ.೨೫ರಂದು ನಾಗನಕಜೆ ಜಯಶ್ರೀ ಉದಯಕುಮಾರ್ ರೈ ಯವರಿಂದ ಹರಿಕಥೆ ಕಾರ‍್ಯಕ್ರಮ. ಸೆ.೨೬ರಂದು ಏನೆಕಲ್ಲು ಕಲಾ ಮಾಯೆ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಪಾರಿಜಾತ ಎಂಬ ಯಕ್ಷಗಾನ ಬಯಲಾಟ ಸೆ.೨೭ರಂದು ಕಲ್ಮಡ್ಕ ಅಂಗನವಾಡಿ ಕೇಂದ್ರದಿಂದ ಸಾಂಸ್ಕೃತಿಕ ವೈಭವ ಸೆ.೨೮ರಂದು ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ಸಾಂಸ್ಕೃತಿಕ ಸಂಭ್ರಮ ಸೆ.೨೯ ರಂದು ಸಂಜೆ ಮಂಗಳೂರು ಹೆಸರಾಂತ ಹುಲಿವೇಷ ಕಲಾವಿದರಿಂದ ಹುಲಿ ತಾಲಿಮು, ಬೆಳಿಗ್ಗೆ ವಾಹನಪೂಜೆ ಮತ್ತು ಆಯುಧ ಪೂಜೆ, ಸೆ.೩೦ರಂದು ಬೆಳಿಗ್ಗೆ ಗಣಹೋಮ, ಸಿಯಾಳಭಿಷೇಕ ಅಕ್ಷರಾಭ್ಯಾಸ, ಧಾರ್ಮಿಕ ಸಭೆ, ಮಹಾಸಂಪ್ರೋಕ್ಷಣೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರು ಪೂಜ್ಯ ಸಾಧ್ವಿ ಮಾತಾನಂದ ಮಯಿ ಆಶೀರ್ವಚನ ನೀಡಲಿದ್ದಾರೆ. ದೇವಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ , ಪಿ.ಡಿ ಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನಿಂತಿಕಲ್ಲು ಕೆ.ಎಸ್.ಜಿ. ಸಂಸ್ಥೆಯ ಅಧ್ಯಕ್ಷ ಅಶೋಕ್ ಕುಮಾರ್ ಕೆ.ಎಸ್ ಮುಖ್ಯ ಅತಿಥಿಗಳಾಗಿರುವರು.ಕೆ.ಪಿ.ಎಸ್.ಸಿ ರ‍್ಯಾಂಕ್ ಪುರಸ್ಕೃತರಾದ ನಿಯೋಜಿತ ಅಸಿಸ್ಟಂಟ್ ಕಮಿಷನರ್ ಅಜಿತ್ ಕುಮಾರ್ ರೈ ಮಾಲೆಂಗ್ರಿ, ದೇವಳದ ಮುಂಭಾಗಕ್ಕೆ ಇಂಟರ್ ಲಾಕ್ ವ್ಯವಸ್ಥೆ ಕಲ್ಪಸಿದ ಕೇರ್ಪಡ ಆನಂದ ಗೌಡರನ್ನು ಸನ್ಮಾನಿಸಲಾಗುವುದು.ಕೇರ್ಪಡ ಕ್ಷೇತ್ರ ವತಿಯಿಂದ ಪ್ರತಿದಿನ ಹುಲಿವೇಷ ತಂಡ ಮನೆ ಮನೆಗೆ ಬೇಟಿ ನೀಡಲಿರುವುದೆಂದು ತಿಳಿದು ಬಂದಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.