ಗುತ್ತಿಗಾರು ಬಳಿಯ ತಳೂರಿನಲ್ಲಿ ಬಸ್ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಸುಬ್ರಹ್ಮಣ್ಯದಿಂದ ಸುಳ್ಯ ಕಡೆಗೆ ಬರುತ್ತಿದ್ದ ಸರಕಾರಿ ಬಸ್ ಮತ್ತು ಸುಳ್ಯ ಕಡೆಯಿಂದ ಹರಿಹರ ಪಲ್ಲತಡ್ಕ ಕಡೆಗೆ ಹೋಗುತ್ತಿದ್ದ ಜೀಪ್ ತಳೂರಿನಲ್ಲಿ ಮುಖಾಮುಖಿ ಢಿಕ್ಕಿ ಹೊಡೆಯಿತು. ಪರಿಣಾಮ ಜೀಪಿನಲ್ಲಿದ್ದ ಹಾಲೆಮಜಲಿನ ಶಶಿ ಎಂಬವರು ಸ್ಥಳದಲ್ಲೇ ಮೃತಪಟ್ಟರು. ಜೀಪ್ ಚಲಾಯಿಸುತ್ತಿದ್ದ ರೋಹಿತ್ ತುಪ್ಪಟ ಸಹಿತ ಮೂವರು ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.