HomePage_Banner_
HomePage_Banner_
HomePage_Banner_

ಉತ್ತಮ ಆಡಳಿತ-ಸರಕಾರಿ ಅನುದಾನ ಸದ್ಬಳಕೆ ಐವರ್ನಾಡು ಗ್ರಾ.ಪಂ.ಗೆ ‘ಗಾಂಧಿ ಗ್ರಾಮ’ ಪುರಸ್ಕಾರ

Advt_NewsUnder_1

Suddi logo copy

ಪಂಚಾಯತದ ಉತ್ತಮ ಆಡ ಳಿತ, ಸರಕಾರಿ ಅನುದಾನದ ಸದ್ಭಳಕೆ, ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಟಾನ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು, ಮೂಲಭೂತ ಸೌಕರ್ಯ ಗಳು, ಉದ್ಯೋಗ ಖಾತರಿ ಯೋಜನೆ ಯಲ್ಲಿ ಸಾಧನೆ ಮೊದಲಾದ ಕಾರ್ಯ ಕ್ರಮಗಳ ಪ್ರಗತಿಯನ್ನು ಪರಿಗಣಿಸಿ ಐವರ್ನಾಡು ಗ್ರಾಮ ಪಂಚಾಯತ್‌ಗೆ ರಾಜ್ಯ ಸರಕಾರದ ಪಂಚಾಯತ್ ರಾಜ್ ಇಲಾಖೆ ೨೦೧೭-೧೮ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದೆ.
ಈ ಸಂಬಂಧ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮೂಲಕ ಗ್ರಾಮ ಪಂಚಾಯತ್‌ಗೆ ಅಧಿಕೃತ ಆದೇಶ ಕಳುಹಿಸಲಿದ್ದು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಅ.೨ ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯ ಪಾಲ ಅಥವಾ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿ ವರು, ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖ ಪ್ರಶಸ್ತಿ ಪತ್ರ ಫಲಕವನ್ನು ನೀಡಿ ಗೌರವಿಸಲಿದ್ದಾರೆ.
ಪ್ರಶಸ್ತಿಗೆ ಪರಿಗಣಿಸಲ್ಪಟ್ಟ ಅಂಶಗಳು : ವೈಯಕ್ತಿಕ ಶೌಚಾಲಯ ನಿಮಾಣ ೨೦೧೬-೧೭ ಸಾಲಿನಲ್ಲಿ ಗುರಿಗೆ ಅನುಗುಣವಾಗಿ ಸಾಧನೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಗುರಿಗೆ ಅನುಗುಣವಾಗಿ ಸಾಧನೆ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನೈಸರ್ಗಿಕ ಸಂಪನ್ಮೂಲಕ್ಕೆ ಸಂಬಂಧಿಸಿದ ಜಲಮರುಪೂರಣ ಘಟಕ, ಕೊಳವೆ ಬಾವಿ, ಕಿಂಡಿ ಅಣೆಕಟ್ಟು, ತೆರೆದ ಬಾವಿ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ,ಸಾರ್ವಜನಿಕ ಕಾಮಗಾರಿಗಳ ಅನುಷ್ಟಾನ ಶೇ.೯೦ ಕ್ಕಿಂತ ಅಧಿಕ ಸಾಧನೆ, ಗ್ರಾಮೀಣ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಸೋಲಾರ್ ದೀಪ ಅಳವಡಿಕೆ, ವಸತಿ ಯೋಜನೆಗಳ ಅನುಷ್ಠಾನ, ೧೪ ನೇ ಹಣಕಾಸು ಯೋಜನೆಗಳ ಕಾಮಗಾರಿಗಳನ್ನು ಪೂರ್ಣವಾಗಿ ಬಳಕೆ ಮಾಡಿ ಕಾರ್ಯಕ್ಷಮತೆ ಹೆಚ್ಚುವರಿ ಅನುದಾನ ಪಡೆದುಕೊಂಡದ್ದು, ಗ್ರಾಮ ಪಂಚಾಯತ ನಲ್ಲಿ ಆಡಳಿತಾತ್ಮಕ ನಿರ್ಣಯ ಸಭೆ, ಕಲಾಪ, ಲೆಕ್ಕಪತ್ರ ನಿರ್ವಹಣೆ, ಕಚೇರಿ ಆಡಳಿತ ನಿರ್ವಹಣೆ, ಪಂಚತಂತ್ರ ಅಳವಡಿಸುವಿಕೆ, ಗ್ರಾಮ ಸಭೆಗಳನ್ನು ಕಾಲ ಕಾಲಕ್ಕೆ ನಡೆಸುವ ಬಗ್ಗೆ, ಲೆಕ್ಕ ಪತ್ರಗಳನ್ನು ಪಂಚತಂತ್ರಗಳಲ್ಲಿ ಅಳವಡಿಸುವಿಕೆ, ಶೇ.೧೦೦ ತೆರಿಗೆ ವಸೂಲಾತಿ ಸಾಧನೆ. ಸ್ಥಾಯಿ ಸಮಿತಿ ಸಭೆ ಆಯೋ ಜನೆ, ಪಂಚಾಯತ್ ಗ್ರಾಮದ ಅಭಿವೃದ್ಧಿ ಯೋಜನೆಯ ಸ್ಪಷ್ಟ ಕಲ್ಪನೆ ದಾಖಲೆ ಕಾಮಗಾರಿಗಳನ್ನು ಗಾಂಧಿ ಸಾಕ್ಷಿ ಕಾಯಕದ ತಂತ್ರಾಂಶದಲ್ಲಿ ಅಳವಡಿಸಿರುವ ಕುರಿತು. ಕ್ರೀಡಾ ಚಟುವಟಿಕೆಗಳ ಸಾಕಾರ, ಕಚೇರಿಯಲ್ಲಿ ಬಯೋಮೆಟ್ರಿಕ್ ಅಳವಡಿಸಿರುವುದು. ಸಿ.ಸಿ.ಟಿ.ವಿ ಅಳವಡಿಕೆ, ಸಕಾಲ ಸೇವೆಗಳ ನಿರ್ವಹಣೆ, ಗ್ರಾ.ಪಂ.ದೊರಕುವ ಸೇವೆಗಳ ಪಾರದರ್ಶಕ ರೀತಿಯಲ್ಲಿ ಜಾರಿಗೊಳಿಸಿರುವುದು. ಈ ಸೊತ್ತು ತಂತ್ರಾಂಶದಲ್ಲಿ ಆಸ್ತಿ ನಮೂನೆಗಳ ವಿತರಣೆ ಮಾಡಿರುವುದು, ಸೋಲಾರ್ ಬೀದಿ ದೀಪ ಅಳವಡಿಸುವಿಕೆ, ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಟಾನ, ಸಂಪೂರ್ಣ ವಿಮಾ ಗ್ರಾಮ ಪ್ರಶಸ್ತಿ, ಕುಡಿಯುವ ನೀರಿಗಾಗಿ ನಳ್ಳಿ ನೀರಿನ ಅಳವಡಿಕೆ, ಸಾರ್ವಜನಿಕ ಕುಂದು ಕೊರತೆಗಳ ನಿವಾರಣೆಗಾಗಿ ಕ್ರಮಗಳು, ಮಾದರಿ ಗ್ರಾಮ ವಿಕಾಸ ಯೋಜನೆ ಅನುಷ್ಟಾನ, ಸಾರ್ವಜನಿಕ ಸ್ಮಶಾನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಂಡಿರುವುದು. ಮೊದಲಾದ ಮಾನದಂಡಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಿಗದಿಪಡಿಸಲಾಗಿತ್ತು. ಅತೀ ಎಚ್ಚು ಅಂಕ ಗಳಿಸಿರುವ ತಾಲೂಕಿನ ಮೂರು ಪಂಚಾಯತ್ ಗಳಾದ ಐವರ್ನಾಡು, ಕಲ್ಮಡ್ಕ ಮತ್ತು ಗುತ್ತಿಗಾರು ಈ ಮೂರು ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ಜಿಲ್ಲಾ ಪಂಚಾಯತ್‌ಗೆ ಕಳುಹಿಸಲಾಗಿತ್ತು. ಜಿಲ್ಲಾ ಪಂಚಾಯತ್ ನಿಂದ ಅಧಿಕಾರಿಗಳು ಬಂದು ಈ ಮೂರು ಗ್ರಾ.ಪಂ.ಗಳನ್ನು ಪರಿಶೀಲನೆ ನಡೆಸಿ ಜಿ.ಪಂ.ಗೆ ವರದಿ ಸಲ್ಲಿಸಿದ್ದರು. ಈ ವರದಿ ಹಾಗೂ ದಾಖಲಾತಿ ಪರಿಶೀಲನೆ ಮಾಡಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸುಳ್ಯ ತಾಲೂಕಿನಿಂದ ರಾಜ್ಯ ಮಟ್ಟಕ್ಕೆ ಕಳುಹಿಸಿದೆ. ಐವರ್ನಾಡು ಗ್ರಾ.ಪಂನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.