HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮುಕ್ಕೂರು : ಮೊಗೇರ ಬಾಂಧವರ ಕ್ರೀಡಾಕೂಟ, ಸಮ್ಮಾನ ಸಮಾರಂಭ, ಅಭಿನಂದನಾ ಕಾರ್ಯಕ್ರಮ

ಪೆರುವಾಜೆ ಮುಕ್ಕೂರು ಮೊಗೇರ ಗ್ರಾಮ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಪ್ರಥಮ ವರ್ಷದ ಮೊಗೇರ ಬಾಂಧವರ ಕ್ರೀಡಾಕೂಟ, ಸಮ್ಮಾನ ಸಮಾರಂಭ, ಅಭಿನಂದನಾ ಕಾರ್ಯಕ್ರಮವನ್ನು ರಾಜೀವ ಗಾಂಧಿ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಡಾ.ಬಿ. ರಘು ಉದ್ಘಾಟಿಸಿದರು.

mukkuru mogera kridakuta copy
ಪೆರುವಾಜೆ ಮೊಗೇರ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಕಾನಾವು ಸಭಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಮೊಗೇರ ಸಂಘದ ನಂದರಾಜ್ ಸಂಕೇಶ,  ಗುರಿಕ್ಕಾರ ಕೊರಗಪ್ಪ ಅನವುಗುಂಡಿ, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಶಂಕರ್ ಪೆರಾಜೆ, ಪಂಜ ವಲಯ ಅರಣ್ಯ ರಕ್ಷಕ ರವಿಚಂದ್ರ, ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಎಂ.ಬಿ.ಚೆಲುವಯ್ಯ, ಗ್ರಾ.ಪಂ.ಸದಸ್ಯ ಚನಿಯ ಕುಂಡಡ್ಕ, ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಕುಂಡಡ್ಕ, ಕೋಶಾಽಕಾರಿ ರಾಮಚಂದ್ರ ಚೆನ್ನಾವರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲಾಕ್ಷೇತ್ರದ ಸಾಧಕ ಐತ್ತ ಪಾಟಾಜೆ, ನಟ ಜಗದೀಶ್ ಪೆರುವಾಜೆ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಕುಂಞಿ ಕಾನಾವು, ಕೊರಗಪ್ಪ ಅನವುಗುಂಡಿ, ಪೂವಪ್ಪ ಅನವುಗುಂಡಿ, ಪುತ್ರ ಮೊಗೇರ ಬೊಮ್ಮಂತಗುಂಡಿ, ಶೇಷಪ್ಪ ಚೆನ್ನಾವರ, ರಮೇಶ್ ಬೊಮ್ಮಂತಗುಂಡಿ ಅವರನ್ನು ಅಭಿನಂದಿಸಲಾಯಿತು. ಚಂದ್ರಶೇಖರ್ ಸ್ವಾಗತಿಸಿ, ಕವಿತಾ ವಂದಿಸಿದರು. ಸವಿತಾ ಮತ್ತು ಪುರುಷೋತ್ತಮ ನಿರೂಪಿಸಿದರು.
ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪದ ಸಮಾರಂಭದಲ್ಲಿ ಸವಣೂರು ಮೊಗೇರ ಸಂಘದ ಗೌರವಧ್ಯಕ್ಷ ವಿಜಯ ಕುಮಾರ್ ಕನ್ಯಾಮಂಗಲ ಬಹುಮಾನ ವಿತರಿಸಿದರು. ಸಂಘದ ಅಧ್ಯಕ್ಷ ರಮೇಶ್ ಕಾನಾವು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖ್ಯ ಅತಿಥಿಗಳಾಗಿ ಸಂಘದ ಉಪಾಧ್ಯಕ್ಷ ಚನಿಯ ಕುಂಡಡ್ಕ, ತಾಲೂಕು ಮೊಗೇರ ಸಂಘದ ಪ್ರ.ಕಾರ್ಯದರ್ಶಿ ಪ್ರಕಾಶ್ ಬಂಗ್ಲೆಗುಡ್ಡೆ, ಅಂಗನವಾಡಿ ಕಾರ್ಯಕರ್ತೆ ರೂಪಾ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.