ಗೂನಡ್ಕ ಮೀಲಾದ್ ಸ್ನೇಹ ಸಂಗಮ

Gunadka milad sangama (2) copyಗೂನಡ್ಕದ ಅಲ್ ಅಮೀನ್ ವೆಲ್‌ಫೇರ್ ಅಸೋಶಿಯೇಶನ್ ವತಿಯಿಂದ ಡಿ.11 ರಂದು ಗೂನಡ್ಕದ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಸ್ನೇಹ ಸಂಗಮ ಸರ್ಮಧರ್ಮಗಳ ಸಮ್ಮಿಲನ ನಡೆಯಿತು. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿದರು. ಕೀಲಾರು ಪ್ರತಿಷ್ಠಾನದ ಅಧ್ಯಕ್ಷ ರಾಜಾರಾಮ ಕೀಲಾರು ಅಧ್ಯಕ್ಷತೆ ವಹಿಸಿದ್ದರು.

Gunadka milad sangama (3) copyಮಸೀದಿಯ ಗುರುಗಳಾದ ಅಬ್ದುಲ್ ಸಖಾಫಿ, ರೇ.ಫಾ.ನವೀನ್ ಪ್ರಕಾಶ್ ಪಿಂಟೋ, ಹರಿರಾಯ ಕಾಮತ್, ಸುಧಾಕರ ರೈ ನೆಟ್‌ಕಾಂ, ಹರೀಶ್ ಕಂಜಿಪಿಲಿ, ಡಿ. ವೀರಪ್ಪ ಗೌಡ, ಇಬ್ರಾಹಿಂ ಸೀಫುಡ್, ಕೆ.ಪಿ ಜಗದೀಶ್, ಶ್ರೇಯಸ್ ಊರುಬೈಲು, ಉಮ್ಮರ್ ಬೀಜದಕಟ್ಟೆ, ಸಂತೋಶ್ ಕುತ್ತಮೊಟ್ಟೆ, ಕಿಶೋರ್ ಕುಮಾರ್ ಉಳುವಾರು, ಯು.ಬಿ ಚಕ್ರಪಾಣಿ, ಶಿವಾನಂದ ಕುಕ್ಕುಂಬಳ, ಎಂ, ಮೇದಪ್ಪ ಗೌಡ, ಜಿ. ರಾಮಚಂದ್ರ, ಚಿದಾನಂದ ಮಾಸ್ತರ್, ದಿನಕರ ಸಣ್ಣಮನೆ ಅತಿಥಿಗಳಾಗಿದ್ದರು. ಮಹಮ್ಮದ್ ಕುಂಞ ಗೂನಡ್ಕ ಸ್ವಾಗತಿಸಿ, ಸವದ್ ಕಾರ್ಯಕ್ರಮ ನಿರೂಪಿಸಿದರು. ಮಸೀದಿ ಅಧ್ಯಕ್ಷ ಇಬ್ರಾಹಿಂ ಮತ್ತು ಪದಾಧಿಕಾರಿಗಳು ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.