ಸಂಪ್ಯ ಠಾಣಾ ಎಎಸ್‌ಐ ವಿಠಲ ಶೆಟ್ಟಿ ಗೆ ಮುಂಭಡ್ತಿ-ಸಂಚಾರಿ ಠಾಣಾ ಎಸ್.ಐ ಆಗಿ ವರ್ಗ

Advt_NewsUnder_1
Advt_NewsUnder_1

vital copyಪುತ್ತೂರು ಗ್ರಾಮಾಂತರ ಠಾಣಾ ಎಎಸ್‌ಐ ಆಗಿದ್ದ ವಿಠಲ ಶೆಟ್ಟಿಯವರು ಎಸ್‌ಐ ಆಗಿ ಭಡ್ತಿ ಹೊಂದಿ ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಸಂಚಾರಿ ಠಾಣಾ ಎಸ್‌ಐ ನಾಗರಾಜ್‌ರವರು ವಿಟ್ಲ ಠಾಣೆಗೆ ವರ್ಗಾವಣೆಗೊಂಡಿದ್ದು, ವಿಟ್ಲ ಠಾಣಾ ಎಸ್‌ಐ ಪ್ರಕಾಶ್ ದೇವಾಡಿಗರವರು ಕಡಬ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ವಿಠಲ ಶೆಟ್ಟಿಯವರು 1982ರಲ್ಲಿ ಕಾನ್ಸ್‌ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಗೊಂಡು ಮಂಗಳೂರಿನ ಉರ್ವಠಾಣೆಯಲ್ಲಿ ಕರ್ತವ್ಯ ಆರಂಭಿಸಿದ್ದರು. ಬಳಿಕ ಪುತ್ತೂರು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂಟ್ವಾಳಕ್ಕೆ ವರ್ಗವಣೆಗೊಂಡಿದ್ದರು. 1992ರಲ್ಲಿ ಬಂಟ್ವಾಳ ಠಾಣೆಯಿಂದ ಹೆಡ್‌ಕಾನ್ಸ್‌ಟೇಬಲ್ ಆಗಿ ಭಡ್ತಿ ಹೊಂದಿ ಕೊಣಾಜೆ ಠಾಣೆಗೆ ವರ್ಗಾವಣೆಗೊಂಡು ಬಳಿಕ ಸುಳ್ಯ ಠಾಣೆಯಲ್ಲಿ ಎಎಸ್‌ಐ ಆಗಿ ಭಡ್ತಿ ಹೊಂದಿ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡು ಪುತ್ತೂರು ಗ್ರಾಮಾಂತರ ಹಾಗು ಈಶ್ವರಮಂಗಲ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಇದೀಗ ಎಸ್‌ಐ ಆಗಿ ಭಡ್ತಿ ಹೊಂದಿ ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರು ಸುಳ್ಯ ತಾಲೂಕಿನ ಪೆರುವಾಜೆ ನಿವಾಸಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.