ಶ್ರೀ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸಭೆಯು ಡಿ.2ರಂದು ಶ್ರೀ ದೈವಗಳ ಮಾಳಿಗೆ ಆವರಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಅಚ್ಚುತ ಗೌಡ ಮುಂಡೋಡಿ ವಹಿಸಿದ್ದರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕಾಳಿಕಾಪ್ರಸಾದ್ ಮುಂಡೋಡಿ, ಸೋಮಶೇಖರ ಕೇವಳ, ಉದಯಕುಮಾರ ದೇರಪ್ಪಜ್ಜನಮನೆ, ಆನಂದ ಗೌಡ ಮುಂಡೋಡಿ, ಅಜಯ್ ವಾಲ್ತಾಜೆ, ಉಮಾವತಿ ದೇವ, ಗಿರಿಜಾ ಪೈಕ ಭಾಗವಹಿಸಿದ್ದರು.
ಸಭೆಯಲ್ಲಿ ಕಂದ್ರಪ್ಪಾಡಿ ರಾಜ್ಯದೈವ ಮತ್ತು ಪುರುಷದೈವ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಾಳಿಕಾಪ್ರಸಾದ್ ಮುಂಡೋಡಿ ಮುಂದಿನ ಮೂರು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾದರು. ಉದಯಕುಮಾರ ದೇರಪ್ಪಜ್ಜನ ಮನೆ ಸೂಚಿಸಿದರು. ಅಜಯ್ ವಾಲ್ತಾಜೆ ಅನುಮೋದಿಸಿದರು.