ಡಿ.10, 11 ರಂದು ಸುಳ್ಯದಲ್ಲಿ ರಾಜ್ಯಮಟ್ಟದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಮ್ಮೇಳನ

Advt_NewsUnder_1
Advt_NewsUnder_1
Advt_NewsUnder_1

a1ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯ ಗೌಡರ ಯುವಸೇವಾ ಸಂಘದ ಸಹಯೋಗದಲ್ಲಿ ಡಿ.10, 11 ರಂದು ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿಸಿದಂತೆ ರಾಜ್ಯಮಟ್ಟದ ಎರಡು ದಿನಗಳ ಸಮ್ಮೇಳವನ್ನು ಗೌಡ ಸಮುದಾಯ ಭವನ ಕೊಡಿಯಾಲಬೈಲುನಲ್ಲಿ ನಡೆಯಲಿದೆ ಎಂದು ಸಮ್ಮೇಳನ ನಿರ್ದೇಶಕ ಅಕಾಡೆಮಿ ಸದಸ್ಯರೂ ಆಗಿರುವ ಸದಾನಂದ ಮಾವಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿ.೧೦ ರಂದು ಪೂರ್ವಾಹ್ನ ಗಂಟೆ ೯ಕ್ಕೆ ಸುಳ್ಯದ ಅಮರಶ್ರೀ ಭಾಗ್‌ನ ಕೆವಿಜಿ ಸಮುದಾಯ ಭವನದಿಂದ ಬೃಹತ್ ಮೆರಮಣಿಗೆಯನ್ನು ಏರ್ಪಡಿಸಿದ್ದು, ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂದು ಕೊಡಿಯಾಲಬೈಲುಗೆ ತೆರಳಿ ನಂತರ ಧ್ವಜಾರೋಹಣ, ಸಮ್ಮೇಳನದ ಅಂಗವಾಗಿ ರೂಪಿಸಲಿರುವ ವಸ್ತು ಪ್ರದರ್ಶನ ಆಹಾರ ಮಳಿಗೆಗಳ ಉದ್ಘಾಟನೆಯಾಗಲಿದೆ ಎಂದು ವಿವರ ನೀಡಿದರು. ಕೆ.ಟಿ.ವಿಶ್ವನಾಥ, ದೊಡ್ಡಣ್ಣ ಬರಮೇಲು, ದಿನೇಶ್ ಮಡಪ್ಪಾಡಿ, ಮದುವೆಗದ್ದೆ ಬೋಜಪ್ಪ, ಪೂವಪ್ಪ ಕಣಿಯೂರು, ಡಾ| ಎನ್.ಎ. ಜ್ಞಾನೇಶ್, ಲೊಕೇಶ್ ಪೆರ್ಲಂಪಾಡಿ ಪತ್ರಿಕಾಗೋಷ್ಠೀಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.