ತೊಡಿಕಾನ : ಮಲಗಿದ್ದಲ್ಲೇ ವ್ಯಕ್ತಿ ಮೃತ್ಯು

Advt_NewsUnder_1
Advt_NewsUnder_1

ತೊಡಿಕಾನ ಗ್ರಾಮದ ಗುಂಡಿಗದ್ದೆ ಎಂಬಲ್ಲಿ ಕೃಷಿಕರೊರ್ವರು ಮಲಗಿದ್ದಲ್ಲೇ ಮೃತ ಪಟ್ಟ ಘಟನೆ ನ.25 ರಂದು ನಡೆದಿದೆ.
ಕೇರಳದ ಜಾಗೋ ಜೋಸೆಫ್ ಎಂಬವರು 5-6 ವರ್ಷಗಳ ಹಿಂದೆ ತೊಡಿಕಾನದ ಗುಂಡಿಗದ್ದೆ ಎಂಬಲ್ಲಿ ಜಾಗ ಖರೀದಿಸಿದ್ದರು. ಕೃಷಿಕರಾಗಿದ್ದ ಅವರು ತನ್ನ ಮಗಳೊಂದಿಗೆ ಇಲ್ಲೇ ನೆಲಿಸಿದ್ದರು. ನ24 ರಂದು ರಾತ್ರಿ ಮನೆಯಲ್ಲೇ ಮಲಗಿದ್ದ ಜೋಸೆಫ್‌ರವರನ್ನು ನ೨೫ರಂದು ಬೆಳಿಗ್ಗೆ ಮನೆಯ ಕೆಲಸದವರು ಒಂದು ಕರೆದಾಗ ಎಚ್ಚರಗೊಳ್ಳಲಿಲ್ಲ ಕೆಲಸದವರು ನೋಡಿ ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಜೋಸೆಫ್‌ರವರ ಮಗಳು ತನ್ನ ಮನೆಗೆ ಹೋಗಿದ್ದರು. ಮನೆಯವರು ಬಂದ ಬಳಿಕ ಬಾಗಿಲಿನ ಬೀಗ ಒಡೆದು ಒಳಗೆ ಪ್ರವೇಶಿಸಬೇಕಿದೆ. ಮನೆಯವರು ಇನ್ನಷ್ಟೇ ಬರಬೇಕಾಗಿದೆ. ಬಂದ ಬಳಿಕ ಘಟನೆಯ ಮಾಹಿತಿ ಸಿಗಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.