ಶಾಲಾ ಶಿಕ್ಷಕಿಯಿಂದ ಅಸ್ಪೃಶ್ಯತೆ ಆಚರಣೆ – ಪೋಷಕರಿಂದ ಶಿಕ್ಷಣಾಧಿಕಾರಿಗೆ ದೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶಾಲಾ ಮಕ್ಕಳನ್ನು ಗೃಹ ಪ್ರವೇಶ ಕಾರ್ಯಕ್ರಮವೊಂದಕ್ಕೆ ಕರೆದೊಯ್ದ ಶಿಕ್ಷಕಿಯೊಬ್ಬರು ಪರಿಶಿಷ್ಟ ಜಾತಿಯ ಶಾಲಾ ಮಕ್ಕಳನ್ನು ಮನೆಯ ಹೊರಗೆ ನಿಲ್ಲಿಸಿ ಇತರರನ್ನು ಮನೆಗೆ ಕರೆದೊಯ್ದ ಘಟನೆ ವರದಿಯಾಗಿದ್ದು, ಈ ಅಸ್ಪೃಶ್ಯತೆ ಆಚರಣೆಯ ವಿರುದ್ಧ ಮಕ್ಕಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕನಕಮಜಲು ಗ್ರಾಮದ ಮಣಿಮಜಲು ಮುಗೇರು ಕಿ.ಪ್ರಾ. ಶಾಲೆಯ ಸಮೀಪ ಪೋಸ್ಟ್ ಮಾಸ್ತರ್‌ರವರ ಮನೆ ಇದೆ. ಅವರು ಹೊಸ ಮನೆ ಕಟ್ಟಿಸಿದ್ದು ಅದರ ಗ್ರಹಪ್ರವೇಶ ಕಾರ್ಯಕ್ರಮ ನ.23 ರಂದು ಇತ್ತು. ಅಂಚಪಾಲಕರ ಆಹ್ವಾನದ ಮೇರೆಗೆ ಮಣಿಮಜಲು ಶಾಲೆಯ ಎಲ್ಲಾ 32 ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಯಿನಿ ಶ್ರೀಮತಿ ಪದ್ಮಾವತಿಯವರು ಗೃಹ ಪ್ರವೇಶಕ್ಕೆ ಕರೆದೊಯ್ದಿದ್ದರು. ಮನೆಯ ಅಂಗಳಕ್ಕೆ ಹೋದ ಬಳಿಕ ಆ 32 ಮಂದಿಯಲ್ಲಿ ಇದ್ದ 8 ಮಂದಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಮನೆಯೊಳಗೆ ಕರೆದೊಯ್ಯದೆ ಹೊರಗೆ ಅಂಗಳದಲ್ಲೇ ನಿಲ್ಲಿಸಿದರು. ಉಳಿದ 24 ಮಂದಿ ಇತರ ಜಾತಿಯ ವಿದ್ಯಾರ್ಥಿಗಳನ್ನು ಮನೆಯೊಳಗೆ ಕರೆದೊಯ್ದು ತೋರಿಸಿದರು. ಅಂಗಳದಲ್ಲಿ ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಸತ್ಯನಾರಾಯಣ ಪೂಜೆ ಪ್ರಸಾದವನ್ನು ಕೂಡ ಹೊರಗೆ ತಂದು ನೀಡಲಾಯಿತು. ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೂ ಅಂಗಳದಲ್ಲಿ ಒಟ್ಟಿಗೆ ಭೋಜನದ ವ್ಯವಸ್ಥೆ ಮಾಡಲಾಯಿತು. ಸಂಜೆ ಶಾಲೆಯಿಂದ ಮನೆಗೆ ಹೋದ ವಿದ್ಯಾರ್ಥಿಗಳಲ್ಲಿ ಕನಕಮಜಲು ಗ್ರಾ.ಪಂ ಸದಸ್ಯೆ ಸವಿತಾ ಚಂದ್ರಶೇಖರ ಎಂಬವರ ಮಕ್ಕಳು ತಾವು ಪೋಸ್ಟ್ ಮಾಸ್ತರ್‌ರವರ ಗೃಹಪ್ರವೆಶಕ್ಕೆ ಹೋದ ವಿಚಾರವನ್ನು ತಂದೆ ತಾಯಿಗೆ ತಿಳಿಸಿದರು. ಮನೆ ಹೇಗಿದೆ ಎಂದು ತಾಯಿ ಕೇಳಿದಾಗ ನಮ್ಮನ್ನು 8 ಜನರನ್ನು ಮನೆಯೊಳಗೆ ಕರೆದೊಯ್ಯದೆ ಹೊರಗೆ ಅಂಗಳದಲ್ಲೇ ನಿಲ್ಲಿಸಿದ್ದರು ಎಂದು ತಿಳಿಸಿದರು . ಆಗ ಶಾಲಾ ಶಿಕ್ಷಕಿ ಅಸ್ಪೃಶ್ಯತೆ ಆಚರಣೆ ಮಾಡಿರುವ ವಿಚಾರ ತಿಳಿದ ಪೋಷಕರು ತಮ್ಮ ಸಮಾಜದ ಮುಖಂಡರು ತಿಳಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.