ಆಲೆಟ್ಟಿ ಗ್ರಾಮದ ಮಾಣಿಮರ್ಧು ಪ್ರದೇಶದಲ್ಲಿ ನಿರಂತರ ಕಾಡಾನೆ ದಾಳಿ ಮಾಡಿ ಕಂಗಾಲಾಗಿದ್ದ ಇವರು ಅರಣ್ಯ ಇಲಾಖೆಗೆ ನಷ್ಟ ಪರಿಹಾರ ಮತ್ತು ಶಾಶ್ವತ ಪರಿಹಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ, ವಲಯಾರಣ್ಯಧಿಕಾರಿ ಪ್ರಶಾಂತ್ ಕುಮಾರ್ ಪೈ, ಉಪವಲಯ ಅರಣಾಧಿಕಾರಿ ಯಶೋಧರ, ಅರಣ್ಯ ವೀಕ್ಷಕರಾದ ವಿನಾಯಕ, ಬಾಲಕೃಷ್ಣ ಇವರ ನೇತೃತ್ವದಲ್ಲಿ ಶ್ರೀಧರ ಮಾಣಿಮರ್ಧುರವರ ಜಾಗದಲ್ಲಿ ಆನೆಕಂಡಕ ನಿರ್ಮಾಣ ಮಾಡಲಾಯಿತು.