HomePage_Banner_
HomePage_Banner_

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸಹೋದರ ಡಿ.ವಿ. ಭಾಸ್ಕರ್ ಗೌಡ ನಿಧನ

ಕೇಂದ್ರ ಸಚಿವರಾಗಿರುವ ಡಿ.ವಿ.ಸದಾನಂದ ಗೌಡರ ಸಹೋದರ ಡಿ.ವಿ. ಭಾಸ್ಕರ್‌ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ೯ ಗಂಟೆ ಸುಮಾರಿಗೆ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.

Bhaskara DV copy
ಮಂಡೆಕೋಲು ಗ್ರಾಮದ ದೇವರಗುಂಡ ದಿ.ವೆಂಕಪ್ಪ ಗೌಡ ಹಾಗೂ ದಿ. ಶ್ರೀಮತಿ ಕಮಲ ದಂಪತಿಗಳ ಮೂರನೇ ಪುತ್ರರಾಗಿರುವ ಭಾಸ್ಕರ್‌ರವರು ವಕೀಲ ಪದವಿಯನ್ನು ಪಡೆದಿದ್ದರು. ಸುಳ್ಯದಲ್ಲಿ ಕೆಲ ವರ್ಷಗಳ ಹಿಂದೆ ನ್ಯಾಯವಾದಿಯಾಗಿದ್ದ ಅವರು ಬಳಿಕ ವಕೀಲ ವೃತ್ತಿಯನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ತಿಂಗಳ ಹಿಂದೆ ಜಾಂಡೀಸ್ ಜ್ವರಕ್ಕೆ ಒಳಗಾಗಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. 15 ದಿನಗಳ ಹಿಂದೆ ಮತ್ತೆ ಜ್ವರ ಉಲ್ಬನಿಸಿ ಅವರನ್ನು ಮಂಗಳೂರಿಗೆ ಕೊಂಡೊಯಲಾಯಿತು. ಅಲ್ಲಿ ಪರೀಕ್ಷೆ ನಡೆಸಿದಾಗಿ ಜಾಂಡೀಸ್‌ನೊಂದಿಗೆ ಲಿವರ್‌ಗೂ ತೊಂದರೆ ಇರುವುದು ಗೊತ್ತಾಯಿತು. ನ.೨೨ರಂದು ಅವರು ಕೊನೆಯುಸಿರೆಳೆದರು.
ಭಾಸ್ಕರ್ ಗೌಡರು ಪತ್ನಿ ಶ್ರೀಮತಿ ವೀಣಾ, ಪುತ್ರರಾದ ಆಶಿಕ್ ಹಾಗೂ ಪ್ರತೀಕ್, ಪುತ್ರಿ ಕು. ಸಾಗರಿಕಾ, ಸಹೋದರರಾದ ಡಿ.ವಿ.ಶಿವರಾಮ, ಡಿ.ವಿ.ಸದಾನಂದ ಗೌಡ, ಡಿ.ವಿ.ಸುರೇಶ್, ಸಹೋದರಿ ಶ್ರೀಮತಿ ರತ್ನಾವತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಭಾಸ್ಕರರು ಬೆಳ್ಳಿಪ್ಪಾಡಿ-ದೇವರಗುಂಡ ತರವಾಡು ಟ್ರಸ್ಟ್‌ನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.