ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಚಾರಗೋಷ್ಠಿಗೆ ಡಾ. ಚಂದ್ರಶೇಖರ ದಾಮ್ಲೆ

Chandrashekhara Damle 6 copyರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.2 ರಿಂದ 4 ರ ತನಕ ಜರಗಲಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಆಮಂತ್ರಿತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಡಿಸೆಂಬರ್ 2 ರಂದು ಅಪರಾಹ್ನ ಪ್ರೋ ವಿ.ಪಿ. ನಿರಂಜನಾರಾಧ್ಯರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ “ಸಮಾನ ಶಿಕ್ಷಣ ನೀತಿಯ ಸಾಧ್ಯತೆಗಳು” ಗೋಷ್ಠಿಯಲ್ಲಿ ಡಾ. ದಾಮ್ಲೆಯವರು “ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಪ್ರಾದೇಶಿಕ ಭಾಷೆಗಳು” ಎಂಬ ವಿಚಾರ ಮಂಡನೆ ಮಾಡಲಿದ್ದಾರೆ. 13ನೇ ಸುಳ್ಯ ತಾಲೂಕು ಸಮ್ಮೇಳನಾಧ್ಯಕ್ಷರಾಗಿದ್ದ ಡಾ. ದಾಮ್ಲೆಯವರು ಹನ್ನೆರಡು ಕೃತಿಗಳನ್ನು ರಚಿಸಿದ್ದು ಶಿಕ್ಷಣ ಕುರಿತಾದ ವಿಚಾರ ಪೂರ್ಣ ಲೇಖನಗಳಿಂದಾಗಿ ಶಿಕ್ಷಣ ತಜ್ಞರೆಂದು ಗುರುತಿಸಲ್ಪಟ್ಟಿದ್ದಾರೆ. ರಾಜ್ಯಮಟ್ಟದ “ಅಸಾಮಾನ್ಯ ಕನ್ನಡಿಗ” ಪ್ರಶಸ್ತಿ, “ಉತ್ತಮ ಕಾಲೇಜು ಶಿಕ್ಷಕ” ಪ್ರಶಸ್ತಿ ಅಲ್ಲದೆ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಇವರು ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಕನ್ನಡ ಮಾಧ್ಯಮದಲ್ಲಿರಬೇಕು ಎಂಬ ಧೋರಣೆ ಹೊಂದಿದ್ದಾರೆ. ಕರಾವಳಿ ಭಾಗದಿಂದ ದಾಮ್ಲೆಯವರೊಬ್ಬರೇ ಈ ಸಮ್ಮೇಳನದಲ್ಲಿ ವಿಚಾರ ಮಂಡನೆಯ ಅವಕಾಶವನ್ನು ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.