ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ.ಪಪೂ ಕಾಲೇಜು ಪಂಜದಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ವಿಭಾಗದ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಅಪೂರ್ವ. ಎಸ್. ಪಿ 7ನೇ , ಜಬಳೆ ಕೃಷಿಕ ಸೋಮಶೇಖರ್ ಹಾಗೂ ನಾರ್ಣಕಜೆಯ ಸ.ಹಿ.ಪ್ರಾ ಶಾಲಾ ಶಿಕ್ಷಕಿ ಪೂರ್ಣಿಮರ ಪುತ್ರಿ , ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ತೃಪ್ತಿ.ಕೆ.ಎಂ 7ನೇ ಸುಳ್ಯದ ಮಹೇಂದ್ರ ಹಾಗೂ ಸುಳ್ಯ ಸೈಂಟ್ ಬ್ರಿಜಿಡ್ಸ್ ಹಿ.ಪ್ರಾ . ಶಾಲಾ ಶಿಕ್ಷಕಿ ಪಾವನರ ಪುತ್ರಿಯು ಬಾಗಲಕೋಟೆಯಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ ,ಪುಷ್ಪವೇಣಿ ತರಬೇತಿ ನೀಡಿ, ಶಾಲಾ ಸಂಚಾಲಕರಾದ ರೆ.ಫಾ. ವಿನ್ಸೆಂಟ್ ಡಿ’ಸೋಜ ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ಬಿನೋಮ ಸಹಕರಿಸಿದರು.