ಮುಕ್ಕೂರಿನಲ್ಲಿ ನೇಸರ ಕಪ್ ಕಬ್ಬಡ್ಡಿ ಪಂದ್ಯಾಟ

mukkurನೇಸರ ಯುವಕ ಮಂಡಲ ಕುಂಡಡ್ಕ -ಮುಕ್ಕೂರು ವತಿಯಿಂದ ಪ್ರಥಮ ವರ್ಷದ ಪುರುಷರ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ನೇಸರ ಕಪ್ ನ.20 ರಂದು ಮುಕ್ಕೂರು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.
ಪುತ್ತೂರಿನ ಕಾನಾವು ಸ್ಕಿನ್ ಕ್ಲಿನಿಕ್‌ನ ಡಾ| ನರಸಿಂಹ ಶರ್ಮ ಕಾನಾವು ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಬಡ್ಡಿ ಇಂದು ಅಂತಾರಾಷ್ಟ್ರೀಯ ಕ್ರೀಡೆಯಾಗಿದ್ದು ಕ್ರೀಡೆ ದೇಹದ ಆರೋಗ್ಯ ಮುಖ್ಯವಾದುದು ಎಂದು ಹೇಳಿದರು.
ವೇದಿಕೆಯಲ್ಲಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಕೆ.ಟಿ.ವಿಶ್ವನಾಥ. ಕೋಶಾಧಿಕಾರಿ ಆರ್.ಬಿ. ಬಶೀರ್, ಮುಕ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆನ್ನಾವರ, ಪೆರುವಾಜೆ ಶ್ರೀ ಜಲದುರ್ಗಾದೆವೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಪೂವಪ್ಪ ನಾಕ, ಧನುಷ್ ಆಳ್ವ ಉಪಸ್ಥಿರತಿದ್ದರು. ನೇಸರ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಎನ್.ಕುಂಡಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಿರಣ್ ಕುಂಡಡ್ಕ ಸ್ವಾಗತಿಸಿ, ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.