ಡಾ. ಮೋಕ್ಷಾ ನಾಯಕ್‌ರಿಗೆ ಪಿ.ಹೆಚ್.ಡಿ. ಪದವಿ

Advt_NewsUnder_1
Advt_NewsUnder_1
Advt_NewsUnder_1

mಕೆ.ವಿ.ಜಿ. ಡೆಂಟಲ್ ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಸಲ್ಲಿಸಿದ ‘ಮಧುಮೇಹ ರೋಗಿಗಳು ಮತ್ತು ಜನಸಾಮಾನ್ಯರಲ್ಲಿನ ಬೇರುನಾಳ ಚಿಕಿತ್ಸೆ ಪಡೆದ ಹಲ್ಲುಗಳ ಬೇರು ತುದಿಗಳ ಪೆರಿಯೋಡಾಂಟಿಕ್ಸ್‌ಗಳಲ್ಲಿನ ಸೂಕ್ಷ್ಮಾಣುಗಳ ಬಗ್ಗೆ ತುಲನಾತ್ಮಕ ಅಧ್ಯಯನ’ ಎಂಬ ಮಹಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಯೇನೆಪೊಯ ಯುನಿವರ್ಸಿಟಿಯ ದಂತ ವೈದ್ಯಕೀಯ ಶಾಸ್ತ್ರ ವಿಭಾಗದ ಡಾ. ಸುಬ್ಬಣ್ಣಯ್ಯ ಕೋಟಿಗದ್ದೆಯವರ ಮಾರ್ಗದರ್ಶನ ಹಾಗೂ ಡಾ. ಹರೀಶ್ ಶೆಟ್ಟಿಯವರ ಸಹ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡಿಸಿದ್ದರು. ಮಂಗಳೂರಿನ ಫಾದರ್‌ಮುಲ್ಲರ್ ಚಾರಿಟೇಬಲ್ ಆಸ್ಪತ್ರೆಯಲ್ಲಿ ಎಂಡೋಡಾಂಟಿಕ್ ಹಾಗೂ ಈಸ್ತೆಟಿಕ್ ದಂತವೈದ್ಯಕೀಯ ತಜ್ಞೆಯಾಗಿಯೂ ಸೇವೆ ಸಲ್ಲಿಸುತ್ತಿರುವ ಡಾ. ಮೋಕ್ಷಾ ನಾಯಕ್ ಕಳೆದ 10 ವರ್ಷಗಳಿಂದ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನಲ್ಲಿ ಪ್ರಾಂಶುಪಾಲೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.