ನ.16 ರಂದು 2 ಗಂಟೆಗಳ ಕಾಲ ವೈದ್ಯಕೀಯ ಸೇವೆ ಸ್ಥಗಿತ

ಕೇಂದ್ರ ಸರಕಾರ ವೈದ್ಯಕೀಯ ಮಂಡಳಿಯನ್ನು ರದ್ದುಗೊಳಿಸಿ ಸಂಪೂರ್ಣವಾಗಿ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ವೈದ್ಯಕೀಯ ಅಯೋಗವನ್ನು ರಚಿಸಲು ಮುಂದಾಗಿದ್ದು, ಇದನ್ನು ಖಂಡಿಸಿ ದೇಶದ 1765 ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಶಾಖೆಗಳನ್ನೊಳಗೊಂಡ ಲಕ್ಷಾಂತರ ವೈದ್ಯರು ನ.೧೬ರಂದು ಬೆಳಿಗ್ಗೆ 11 ರಿಂದ 1 ಗಂಟೆಯ ವರೆಗೆ ಪ್ರತಿಭಟನೆ ನಡೆಸಲಿದ್ದಾರೆ.
ಕೇಂದ್ರ ಸರಕಾರ ಗಮನಕ್ಕೆ ತರಲಾದ ವೈದ್ಯಕೀಯ ಕ್ಷೇತ್ರದ ಹಲವು ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಬದಲು ವೈದ್ಯಕೀಯಮಂಡಳಿಯನ್ನೇ ರದ್ದು ಮಾಡಿದ್ದು, ಭಾರತೀಯ ಇದು ವೈದ್ಯಕ್ಷೇತ್ರಕ್ಕೆ ಮಾರಕವಾಗಿದೆ. ಆದ್ದರಿಂದ ಈ ಎರಡು ಗಂಟೆಗಳ ಪ್ರತಿಭಟನೆ ಜೊತೆಗೆ ತಮ್ಮ ಬೇಡಿಕೆಗಳ ಮನವಿ ಪತ್ರಗಳನ್ನು ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಂದ ಮಾನ್ಯ ಪ್ರಧಾನ ಮಂತ್ರಿಯವರಿಗೆ ತಲುಪಿಸುವುದು ಮತ್ತು ಈ ಮುಖಾಂತರ ಕೇಂದ್ರ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಗಮನ ಸೆಳೆಯಲಾಗುತ್ತದೆ ಎಂದು ಸುಳ್ಯದ ಐಎಂಎ ಅಧ್ಯಕ್ಷ ಡಾ.ಗಣೇಶ್ ಭಟ್ ಹಾಗು ಕಾರ್ಯದರ್ಶಿ ಡಾ.ಶ್ರೀಕೃಷ್ಣ ಬಿ.ಎನ್.ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.