ಬೆಳ್ಳಾರೆ ರೋಟರಿ ಸಮುದಾಯ ದಳದಿಂದ ಅಂಗನವಾಡಿ ಮಕ್ಕಳೊಂದಿಗೆ

Advt_NewsUnder_1
Advt_NewsUnder_1
Advt_NewsUnder_1

unnamed copyಬೆಳ್ಳಾರೆ ರೋಟರಿ ಸಮುದಾಯ ದಳ ಇದರ ವತಿಯಿಂದ ಬೆಳ್ಳಾರೆ ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದ ಚಿಣ್ಣರೊಂದಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ ‘ಚಿಣ್ಣರ ಕಲರವ’ ಎಂಬ ವಿನೂತನ ಕಾರ್ಯಕ್ರಮವು ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪುಟಾಣಿಗಳಿಗೆ ವಿವಿಧ ಹಾಡು, ನೃತ್ಯ ಇನ್ನಿತರ ಸ್ಪರ್ಧಾಕೂಟವನ್ನು ಏರ್ಪಡಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಯಿತು. ಕೇಂದ್ರದ 40 ಪುಟಾಣಿಗಳಿಗೆ ಸಿಹಿತಿಂಡಿ ವಿತರಿಸಿ, ಬಹುಮಾನ ವಿತರಿಸಿ ಅತಿಥಿಗಳು ಹಾರೈಸಿದರು.
ರೋಟರಿ ಸಮುದಾಯ ದಳ ಬೆಳ್ಳಾರೆ ಟೌನ್ ಇದರ ಅಧ್ಯಕ್ಷ ಎಸ್. ವಸಂತ ಬೋರ್ಕರ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ರೋಟರಿ ಜಿಲ್ಲಾ ವಲಯ ಯೂತ್ ಎಕ್ಸ್‌ಚೇಂಜ್‌ನ ಕಾರ್ಡಿನೇಟರ್ ಬಿ. ಸುಬ್ರಹ್ಮಣ್ಯ ಜೋಷಿ, ಅಂಗನವಾಡಿ ಮುಂದಾಳತ್ವ ಬೆಂಬಲ ಸಮಿತಿಯ ಅಧ್ಯಕ್ಷ ಬಿ. ಸುದರ್ಶನ್ ಶೆಣೈ, ದಳದ ಕಾರ್ಯದರ್ಶಿ ಗುಣವತಿ ಜಿ ಶೆಟ್ಟಿ, ಖಜಾಂಜಿ ಮೋಹಿನಿ, ಸಹಾಯಕಿ ಗುಲಾಬಿ, ದಳದ ಇತರ ಸದಸ್ಯರು ಮತ್ತು ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. ಕೇಂದ್ರದ ಶಿಕ್ಷಕಿ ಇಂದಿರಾ ವಂದನಾರ್ಪಣೆಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.