ಸುಳ್ಯದಲ್ಲಿ ಕಟ್ಟಡ ಕಾರ್ಮಿಕರಿಗೆ ಜಾಗೃತಿ ಅಭಿಯಾನ

22ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸುಳ್ಯ ತಾಲೂಕು ಇದರ ವತಿಯಿಂದ 2 ನೇ ಹಂತದ ಕಾರ್ಮಿಕ ಜಾಗೃತಿ ಅಭಿಯಾನದ ಉದ್ಘಾಟನೆ ಮತ್ತು ಕಂಟ್ರಾಕ್ಟ್ ದಾರ, ಮೇಸ್ತ್ರೀ ಕಾರ್ಮಿಕರಿಗೆ ಪ್ರಮಾಣ ಭೋದನಾ ಕಾರ್ಯಕ್ರಮ ನ.13 ರಂದು ಸುಳ್ಯ ಲಯನ್ಸ್ ಸೇವಾ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಜಾನಿ ಕೆ.ಪಿ. ವಹಿಸಿದ್ದರು. ಕಾರ್ಯಕ್ರಮವನ್ನು ಸರ್ಕಲ್ ಇನ್‌ಸ್ಪೆ ಕ್ಟರ್ ಕೃಷ್ಣಯ್ಯ ಉದ್ಘಾಟಿಸಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಇಲಾಖಾ ಮಾಹಿತಿ ನೀಡಿದರು. ಸಿ.ಐ.ಟಿ.ಯು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಮಾಣ ಬೋಧನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಹರೀಶ್ ಬಂಟ್ವಾಳ್, ಇಂಜಿನಿಯರಿಂಗ್ ಅಸೋಸಿಯೇಶನ್ ಅಧ್ಯಕ್ಷ ಜೀವನ್ ನಾರ್ಕೋಡ್, ಸಿವಿಲ್ ಕಂಟ್ರಾಕ್ಟ್‌ರ್‌ರವಿ ಕಕ್ಕೆಪದವು, ಗುತ್ತಿಗೆದಾರ ಗೋಪಾಲಕೃಷ್ಣ, ಹಿರಿಯ ಇಂಜಿನಿಯರ್ ಡಿ.ಎಂ.ಸುಮಿತ್ರ, ಕೆಂಪುಕಲ್ಲಿನ ಕ್ವಾರಿಗಳ ಮಾಲಕರ ಸಂಘದ ಅಧ್ಯಕ್ಷ ರಾಮಕೃಷ್ಣ ಅಳಂಕಲ್ಯ, ಗುತ್ತಿಗೆದಾರ ನೆಲ್ಸನ್ ಪಿ.ವಿ., ಲಾರಿ ಚಾಲಕ ಮಾಲಕ ಸಂಘದ ಖಜಾಂಜಿ ಗೋಪಾಲಕೃಷ್ಣ ಪೊಸವೊಳಿಗೆ, ಬಿಜು ಅಗಸ್ಟಿನ್, ಶಿವರಾಮ ಗೌಡ, ಜನಾರ್ದನ ಆಚಾರ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಾಗರಾಜ ಮೇಸ್ತ್ರಿ, ನಾರಾಯಣ ಮೇಸ್ತ್ರೀ, ಕೃಷ್ಣ ಮೇಸ್ತ್ರೀ, ವಿಜಯ ಮೇಸ್ತ್ರೀ, ಉಸ್ಮಾನ್ ಸ್ವಾಗತಿಸಿ, ಜಯಂತ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.