ಕೂತ್ಕುಂಜ ಹೆಗ್ಡೆ ಯವರ ನಿವಾಸಕ್ಕೆ ರಮಾನಾಥ ರೈ ಭೇಟಿ

kuthukunja rai beti (1)ಪಂಜ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಹಿರಿಯ ಕಾರ್‍ಯಕರ್ತ, ಕೂತ್ಕುಂಜದ ದಿವಂಗತ ಜಯಕುಮಾರ ಹೆಗ್ಡೆ ಯವರ ನಿವಾಸಕ್ಕೆ ಉಸ್ತುವರಿ ಸಚಿವ ರಮಾನಾಥ ರೈ ಯವರು ಭೇಟಿ ನೀಡಿದರು ದಿ.ಜಯಕುಮಾರ ಹೆಗ್ಡೆ ಮತ್ತು ರಮಾನಾಥ ರೈ ಅವರು ಬಹಳ ಹಿಂದೆಯೇ ಆತ್ಮೀಯರಾಗಿದ್ದು ಭೇಟಿಗೆ ಕಾರಣವಾಗಿತ್ತು. ಈ ಸಂದರ್ಭ ದಿವಂಗತ ಜಯಕುಮಾರ ಹೆಗ್ಡೆ ಯವರ ಪತ್ನಿ ಪ್ರಭಾವತಿ , ಪುತ್ರರಾದ ಶರತ್‌ಕುಮಾರ್, ಭರತ್‌ಕುಮಾರ್, ಪುತ್ರಿಯರಾದ ಸುಮಂಗಲ, ಸವರ್ಣಲತಾ, ಹಾಗೂ ಧರ್ಮಪಾಲ ಜೈನ್ , ಪಂಜ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ವಾಸುದೇವ ಪಳಂಗಾಯ, ಮಾಜಿ ಉಪಾಧ್ಯಕ್ಷ ನಾರಾಯಣ ನಾಯ್ಕ, ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಕಾಂಗ್ರೇಸ್ ಮುಖಂಡ ಡಾ.ರಘು, ಪಂಜ ಗ್ರಾ.ಪಂ.ಅಧ್ಯಕ್ಷ ಕಾರ್‍ಯಪ್ಪ ಗೌಡ ಚಿದ್ಗಲ್ಲು,ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಬೊಳ್ಳಾಜೆ, ಶಿವರಾಮಯ್ಯ ಕರ್ಮಾಜೆ, ವೆಂಕಟೇಶ್ವರ ಜೋಯಿಷ, ಪುಟ್ಟಣ್ಣ ಗೌಡ ಚಿದ್ಗಲ್ಲು, ನರೇಂದ್ರ ಗಟ್ಟಿಗಾರು, ನಂದಕುಮರ್ ಗಟ್ಟಿಗಾರು ಮೊದಲಾದವರು ಉಪಸ್ಥಿತರಿದ್ದರು. ಕೂತ್ಕುಂಜ ಗ್ರಾಮದಲ್ಲಿ ಶಂಕರನಾರಾಯಣ ಮಠ ಸಾನಿಧ್ಯವು ನೆಲ ಸಮವಾಗಿದ್ದು, ಅದನ್ನು ಮತ್ತೆ ಪುನರ್ ನಿರ್ಮಾಣವಾಗಬೇಕಾಗಿರುವುದಾಗಿ ಸಚಿವರ ಗಮನಕ್ಕೆ ತರಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.