ಜಯನಗರ : ಶಾಸಕ ಅಂಗಾರ ಭೇಟಿ

Jayanagaraಜಯನಗರ ತಹಶೀಲ್ದಾರರ ಅದೇಶದ ಮೇರೆಗೆ ನಿವೇಶನ ಅಡಿ ಸ್ಥಳದ ಸರ್ವೆ ಕಾರ್ಯ ಆರಂಭಗೊಂಡಿದ್ದು ಶಾಸಕ ಅಂಗಾರ ಜಯನಗರಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡರು.
ಜಯನಗರ ಪರಿಸರದ ಈ ಹಕ್ಕು ಪತ್ರ ಬೇಡಿಕೆಯ ವಿಷಯವು ಬಹಳ ವರ್ಷದ ಹಿಂದಿನಿಂದಲೇ ಮುಖ್ಯವಾದ ಬೇಡಿಕೆಯಾಗಿದ್ದು ಸ್ಥಳೀಯರಿಂದ ಹಾಗೂ ಈ ಭಾಗದ ಜನಪ್ರತಿನಿಧಿಗಳಿಂದ ಹಲವಾರು ಭಾರಿ ಸರಕಾರಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಅದರ ಸಂಪೂರ್ಣ ವಿವರವನ್ನು ಸರಕಾರಕ್ಕೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಅವರವರ ನಿವೇಶನದ ಅಡಿ ಸ್ಥಳಕ್ಕೆ ಆಧಾರ ಪತ್ರವನ್ನು ನೀಡುವ ಬಗ್ಗೆ ಪ್ರಯತ್ನ ನಡೆಸಲಾಗುವುದು. ಅಲ್ಲಿಯ ನಿವಾಸಿಗಳು ತಾಳ್ಮೆಯಿಂದ ಹಾಗೂ ಸಂಘಟಿತವಾಗಿ ಪ್ರಯತ್ನಿಸಬೇಕು. ಅದಕ್ಕೆ ಸಂಪೂರ್ಣವಾದ ಸಹಕಾರವನ್ನು ನೀಡುವುದಾಗಿ ಅವರು ತಿಳಿಸಿದರು.

ಸಮಿತಿಯ ಸಂಚಾಲಕ ಜಗನ್ನಾಥ, ಸ್ಥಳೀಯರ ಅಹವಾಲುಗಳನ್ನು ಶಾಸಕರಿಗೆ ಮಾನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ನ.ಪಂ ಸದಸ್ಯರುಗಳಾದ, ಎನ್.ಎ. ರಾಮಚಂದ್ರ, ಗಿರೀಶ್ ಕಲ್ಲುಗದ್ದೆ, ನ.ಪಂ.ಸದಸ್ಯೆ ಜಾನಕಿ ನಾರಾಯಣ, ಸಮಿತಿ ಅಧ್ಯಕ್ಷ ರಾಧಾ ಕೃಷ್ಣ ನಾಯಕ್, ಮೋಹಿನಿ, ಶಾಹಿ ಜಟ್ಟಿಪಳ್ಳ, ಸಂಶುದ್ಧೀನ್ ಜಯನಗರ, ಸಹ ಸಂಚಾಲಕ ಹಸೈನಾರ್ ಜಯನಗರ, ಕಾರ್ಯದರ್ಶಿ ಉಸ್ಮಾನ್, ಲೋಲಾಕ್ಷಿ ಜಯನಗರ, ಶಿಲ್ಪಾ ಸುದೇವ, ಹೇಮಾವತಿ ಜಯನಗರ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.