500-1000 ರೂಪಾಯಿ ರದ್ದು – ಬ್ಯಾಂಕ್‌ಗಳಿಗೆ ಮುಗಿಬಿದ್ದ ಜನತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಐನೂರು, ಸಾವಿರ ರೂಪಾಯಿಯ ಹಳೆ ನೋಟುಗಳನ್ನು ಅಮಾನ್ಯ ಮಾಡಿದ್ದರಿಂದ ನೋಟುಗಳ ಬದಲಾವಣೆಗೆ ಬ್ಯಾಂಕ್‌ಗಳಲ್ಲಿ ಬೆಳಿಗ್ಗಿನಿಂದಲೇ ಜನರು ಮುಗಿ ಬಿದ್ದಿರುವ ದೃಶ್ಯ ಬಹುತೇಕ ಕಡೆಗಳಲ್ಲಿ ಕಂಡು ಬಂತು.

SBI BAnk  1

ಜನರು ಸರತಿಯ ಸಾಲಿನಲ್ಲಿ ನಿಂತು ನೋಟುಗಳನ್ನು ಬದಲಾಯಿಸಿದರು. 2 ಸಾವಿರ ಹಾಗೂ ಐನೂರು ಮುಖ ಬೆಲೆಯ ನೋಟುಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದರೂ ಸುಳ್ಯದ ಬ್ಯಾಂಕ್‌ಗಳಿಗೆ ಅದು ತಲುಪದಿರುವುದರಿಂದ ಹಳೆ ನೂರು ರೂಪಾಯಿ ನೋಟುಗಳನ್ನು ಬದಲಾಯಿಸಿ ನೀಡಲಾಗುತ್ತಿದೆ. ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಗರಿಷ್ಠ 10 ಸಾವಿರ ರೂಪಾಯಿಗಳನ್ನು ಹಿಂದಕ್ಕೆ ಪಡೆಯುವ ಅವಕಾಶ ನೀಡಲಾಗಿದೆ. ಹಾಗಿದ್ದೂ ನೋಟುಗಳ ಕೊರತೆಯಿಂದ ಹಲವು ಬ್ಯಾಂಕ್‌ಗಳು ೨ರಿಂದ ೪ ಸಾವಿರ ಮಾತ್ರ ಗ್ರಾಹಕರಿಗೆ ನೀಡುತ್ತಿದ್ದವು. ಖಾತೆ ಇಲ್ಲದೆ ಬದಲಾಯಿಸಲು ನಾಲ್ಕು ಸಾವಿರದವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಸುಳ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಗರಿಷ್ಠ ನಾಲ್ಕು ಸಾವಿರ ನೀಡುತ್ತಿದ್ದರೆ ಕರ್ನಾಟಕ ಬ್ಯಾಂಕ್‌ನಲ್ಲಿ ಕೇವಲ 2 ಸಾವಿರ ಮಾತ್ರ ನೀಡಲಾಗುತ್ತಿತ್ತು. ಖಾತೆ ಇಲ್ಲದೆ ಹಣ ಬದಲಾವಣೆಗೆ ಅರ್ಜಿಯೊಂದಿಗೆ ಗುರುತು ಚೀಟಿ ನೀಡಬೇಕಿತ್ತು.
ಪೂರಕ ವ್ಯವಸ್ಥೆ ಮಾಡದೇ ಸರ್ಕಾರ ದಿಢೀರ್ ನಿರ್ಧಾರ ಕೈಗೊಂಡಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ನೋಟು ಬದಲಿಸಲು ಸಾಲಿನಲ್ಲಿ ನಿಂತಿದ್ದ ಗ್ರಾಹಕರು ಅನಿಸಿಕೆ ವ್ಯಕ್ತಪಡಿಸಿದರು.SBI BAnk

ಶುಕ್ರವಾರದಿಂದ 2 ಸಾವಿರ ರೂಪಾಯಿ ನೋಟುಗಳನ್ನು ವಿತರಿಸಲು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಆದೇಶ ನೀಡುವ ಸಾಧ್ಯತೆ ಇದ್ದು, ಮುಂದಿನ ವಾರದಲ್ಲಿ ಎಲ್ಲಾ ವ್ಯವಸ್ಥೆಗಳು ಸರಿಯಾಗುತ್ತವೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದರು. ಎಲ್ಲಾ ಬ್ಯಾಂಕ್‌ಗಳು ೨ನೇ ಶನಿವಾರ ಹಾಗೂ ಭಾನುವಾರ ರಜೆಯಿದ್ದರೂ ಕಾರ್ಯನಿರ್ವಹಿಸುತ್ತವೆ. ಸಂಜೆ 6 ಗಂಟೆಯವರೆಗೂ ವ್ಯವಹಾರ ನಡೆಸುತ್ತವೆ. ನೋಟು ಬದಲಾವಣೆಗೆ ೫೦ ದಿನಗಳ ಅವಕಾಶವನ್ನೂ ಸರ್ಕಾರ ನೀಡಿದೆ. ಶುಕ್ರವಾರದಿಂದಲೇ ಎಟಿಎಂಗಳು ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಜನರೂ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.

ಎಲ್ಲಾ ಬ್ಯಾಂಕ್‌ಗಳಲ್ಲಿ ಕೆಲಸದ ಒತ್ತಡ ಇದ್ದರೂ ಅಧಿಕಾರಿಗಳು ತಾಳ್ಮೆಯಿಂದ ಕೆಲಸ ಮಾಡುತ್ತಿದ್ದಾರೆ. ಹಲವು ಬ್ಯಾಂಕ್‌ಗಳಲ್ಲಿ ನೋಟು ಬದಲಾವಣೆಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಸಾಮಾನ್ಯ ಗ್ರಾಹಕರಿಗೆ ಹಣ ವರ್ಗಾವಣೆಗೆ ಹೆಚ್ಚಿನ ಸಮಸ್ಯೆ ಆಗಿಲ್ಲ. ಕನಿಷ್ಠ ಪ್ರಮಾಣದಲ್ಲಿ 100 ರೂಪಾಯಿ ನೋಟು ಇರುವುದರಿಂದ ಪ್ರತಿ ಗ್ರಾಹಕರಿಗೂ ಗರಿಷ್ಠ 4 ಸಾವಿರ ಮಾತ್ರ ವಿತರಿಸುತ್ತಿರುವುದಾಗಿ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಶೈಲೇಶ್ ತಿಳಿಸಿದರು.
Hdfc bank sullia
ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್‌ಗಳಲ್ಲಿ ಬೆಳಿಗ್ಗೆ ಸಾಕಷ್ಟು ಉದ್ದದ ಸಾಲು ಇತ್ತು ಅದರೆ 11 ಗಂಟೆ ವೇಳೆಗೆ ಅಲ್ಲಿದ್ದ ಸೀಮಿತ ನಗದು ಖಾಲಿಯಾಯಿತು. ಹಾಗಾಗಿ ಬಳಿಕ ಸರತಿ ಸಾಲು ಕಂಡು ಬರಲಿಲ್ಲ.
ಅಂಚೆ ಕಛೇರಿಗಳಲ್ಲು ಹಣ ಬದಲಾವಣೆಗೆ ಅವಕಾಶ ಇದೆ ಎಂದು ಕೇಂದ್ರ ಸರಕಾರ ಘೋಷಿಸಿದ್ದರು ಸುಳ್ಯದ ಮುಖ್ಯ ಅಂಚೆ ಕಛೇರಿಯಲ್ಲಿ ಮಾತ್ರ ಹಣ ಬದಲಾವಣೆಗೆ ಅವಕಾಶವಿದೆ. ಉಳಿದಂತೆ ತಾಲೂಕಿನ ಎಲ್ಲಾ ಉಪ ಅಂಚೆ ಕಛೇರಿಗಳಲ್ಲಿ ಹಾಗೂ ಗ್ರಾಮೀಣ ಅಂಚೆ ಕಛೇರಿಗಳಲ್ಲಿ ಹಣ ಬದಲಾವಣೆಯನ್ನು ಮಾಡುತ್ತಿಲ್ಲ ಗ್ರಾಹಕರು ಅಂಚೆ ಕಛೇರಿಗೆ ಬಂದು ವಿಚಾರಿಸಿ ಹೋಗುತ್ತಿದ್ದರೂ ಇಲ್ಲಿ ೫೦೦, 1000 , ನೋಟಿನ ಬದಲಾವಣೆಗೆ ಇಲಾಖೆ ಕ್ರಮ ಕೈಗೊಂಡಿಲ್ಲ
ಬ್ಯಾಂಕ್‌ನಲ್ಲಿ ಹಣ ಬದಲಿಸಲು ಖಾತೆ ಇಲ್ಲದ ಗ್ರಾಹಕರಿಗೆ ಪೂರಕ ದಾಖಲೆ ನೀಡಬೇಕಿದ್ದರಿಂದ ಕೆಲವು ಜೆರಾಕ್ಸ್ ಅಂಗಡಿಯವರು ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಗ್ರಾಹಕರು ದೂರಿದ್ದಾರೆ.

ಹಳೆಯ ನೋಟು ಬದಲಾವಣೆಗೆ ಗ್ರಾಹಕರಲ್ಲದವರು ಬ್ಯಾಂಕಿಗೆ ಅರ್ಜಿಯೊಂದಿಗೆ ಪೂರಕ ದಾಖಲೆ ನೀಡುವ ಅಗತ್ಯವಿದ್ದು, ಆಧಾರ್ ಕಾರ್ಡ್, ರೇಶನ್ ಕಾರ್ಡ್, ವೋಟರ್ ಐಡಿ ಅಥವಾ ಇತರ ದಾಖಲೆಗಳ ಝೆರಾಕ್ಸ್ ನೀಡಬೇಕಿದೆ. ಪ್ರತಿ ಪುಟಕ್ಕೆ ಗರಿಷ್ಠ 2 ದರವಿದ್ದರೆ ಕೆಲವು ಅಂಗಡಿಯವರು 6 ರೂಪಾಯಿವ ವಸೂಲಿ ಮಾಡುತ್ತಿದ್ದಾರೆ. ಚಿಲ್ಲರೆ ಬದಲಿಗೆ ಚಾಕೋಲೆಟ್ ನೀಡುತ್ತಿದ್ದಾರೆ ಎಂದು ಅರಂತೋಡಿನ ದೇರಾಜೆ ಆದರ್ಶ ದೂರಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.