ವಾಹನ ಅಪಘಾತ ಶ್ರೀದೇವಿ ನಾಗರಾಜ್ ಭಟ್ ಜಖಂ

shreedevi accident 1 copyಗುತ್ತಿಗಾರು ಸಮೀಪದ ವಳಲಂಬೆ ಬಳಿ ವಾಹನ ಅಪಘಾತ ಸಂಭವಿಸಿ ಸುಳ್ಯದ ಶ್ರೀದೇವಿ ನಾಗರಾಜ್ ಭಟ್ ಹಾಗೂ ಬಾಳುಗೋಡಿನ ಉಪ್ಪುಕಳ ಚಿದಾನಂದ ಎಂಬವರು ತೀವ್ರ ಗಾಯಂಗೊಂಡಿರುವ ಘಟನೆ ನಿನ್ನೆ ಬೆಳಿಗ್ಗೆ ವರದಿಯಾಗಿದೆ.
ಶ್ರೀದೇವಿ ನಾಗರಾಜ್ ಭಟ್ ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಶಾಂತಿ ಎಂಬವರ ಜೊತೆಗೆ ತೆರಳುತ್ತಿದ್ದರು. ಬಾಳುಗೋಡಿನ ಉಪ್ಪುಕಳ ಚಿದಾನಂದ ಎಂಬವರು ಕರುಣಾಕರ ಎಂಬವರ ಜೊತೆ ಬೈಕ್‌ನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದರು.
ವಳಲಂಬೆ ಬಳಿಯ ಕಡ್ತಲ್‌ಕಜೆ ಸಮೀಪ ವಾಹನ ಅಪಘಾತ ಸಂಭವಿಸಿತು. ಪರಿಣಾಮವಾಗಿ ಶ್ರೀದೇವಿ ನಾಗರಾಜ್ ಭಟ್ ಹಾಗೂ ಉಪ್ಪುಕಳ ಚಿದಾನಂದ ತೀವ್ರ ಗಾಯಗೊಂಡರು. ಅವರಿಬ್ಬರು ಈ ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

shreedevi accident copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.