ವಹೀದಾರಿಗೆ ತಪ್ಪಿದ ಗೇರು ನಿಗಮದ ಅಧ್ಯಕ್ಷತೆ ?

Vaheeda Ismail new photo ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸರಕಾರದಿಂದ 2 ದಿನಗಳ ಹಿಂದಷ್ಟೆ ನಿಯುಕ್ತರಾಗಿದ್ದ ಬೆಳ್ಳಾರೆಯ ಶ್ರೀಮತಿ ವಹೀದಾ ಇಸ್ಮಾಯಿಲ್‌ರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿರುವುದಾಗಿ ತಿಳಿದುಬಂದಿದೆ. ಗೇರು ನಿಗಮದ ಅಧ್ಯಕ್ಷರಾಗಿ ವಹೀದಾರನ್ನು 2 ದಿನಗಳ ಹಿಂದೆ ಸರಕಾರ ನೇಮಿಸಿತ್ತು. ಸುಳ್ಯದಲ್ಲಿ ಈ ಹಿಂದೆ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರನ್ನಾಗಿ ದಿವ್ಯಪ್ರಭಾ ಚಿಲ್ತಡ್ಕರನ್ನು ನೇಮಕಮಾಡಲಾಗಿದ್ದರೂ ಇದೀಗ ಮತ್ತೆ ಸುಳ್ಯದವರಿಗೆ ನಿಗಮದ ಅಧ್ಯಕ್ಷತೆ ನೀಡಿದ್ದು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತ್ತೆನ್ನಲಾಗಿದೆ. ಅದು ಅಲ್ಲದೆ ವಹೀದಾರಿಗೆ ನಿಗಮಾಧ್ಯಕ್ಷತೆ ನೀಡುವಾಗ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಸಲಹೆ ಪಡೆದಿರಲಿಲ್ಲವೆಂದೂ ಈ ಹಿನ್ನೆಲೆಯಲ್ಲಿ ಗೇರು ನಿಗಮದ ಅಧ್ಯಕ್ಷತೆಯನ್ನು ರಮಾನಾಥ ರೈ ಆಪ್ತರಾಗಿರುವ ಬಂಟ್ವಾಳದ ಪಿ.ಎಚ್. ಖಾದರ್‌ರವರಿಗೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪಿ.ಎಚ್. ಖಾದರ್‌ರವರು ವಹೀದಾರನ್ನೂ ಬದಲಿಸಿ ತಮ್ಮನ್ನೂ ಮಾಡಿದ ಆದೇಶವನ್ನು ಪಡೆದುಕೊಂಡು ಬರಲು ಬೆಂಗಳೂರಿನಲ್ಲಿ ಕಾಯುತ್ತಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.