ಪಂಜದಲ್ಲಿ ತಾಳಮದ್ದಳೆ ಸಪ್ತಾಹ-ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

panja thalamadale sapthaha ..ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ವಿಶೇಷ ತಾಳಮದ್ದಳೆ ಸಪ್ತಾಹ ನ.1.ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಕೇನ್ಯ ಶಾರದಾ ಗಾರ್ಡನ್‌ನ ಮಮತಾ ಶೆಟ್ಟಿಯವರು ದೀಪ ಬೆಳಗಿಸಿ ಶುಭಹಾರೈಸಿದರು. ಕಲಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಕೂತ್ಕುಂಜ ಅಧ್ಯಕ್ಷತೆ ವಹಿಸಿದ್ದರು.

1 ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ, ಪಂಜ ಪರಿಸರದ ಸಾರ್ವಜನಿಕ ಗಣೇಶೋತ್ಸವದ ಉಪಾಧ್ಯಕ್ಷ ಚಿನ್ನಪ್ಪ ಸಂಕಡ್ಕ ಹಾಗೂ ಟ್ರಸ್ಟ್‌ನ ಕಾರ್‍ಯದರ್ಶಿ ಪೂವಪ್ಪ ಗೌಡ ಚಿದ್ಗಲ್ಲು, ಕಾರ್‍ಯಕ್ರಮದ ಸಂಯೋಜಕರಾದ ಕೃಷ್ಣ ವೈಲಾಯ, ಪ್ರಶಾಂತ್ ರೈ ಪಲ್ಲೋಡಿ, ಕಲಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಾಲಕೃಷ್ಣ ಪುತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ನೇಮಕ ಗೊಂಡ ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.ಕಾರ್‍ಯಕ್ರಮದಲ್ಲಿ ಶ್ಯಾಮ್ ಕೃಷ್ಣನಗರ ಸ್ವಾಗತಸಿದರು. ಬಾಲಕೃಷ್ಣ ಪುತ್ಯ ಸ್ವಾಗತಿಸಿದರು.ಗುರುಪ್ರಸಾದ್ ತೋಟ ನಿರೂಪಿಸಿದರು. ಪೂವಪ್ಪ ಗೌಡ ಚಿದ್ಗಲ್ಲು ವಂದಿಸಿದರು.ನಂತರ ‘ಶ್ರೀರಾಮ ಪಟ್ಟಾಭಿಷೇಕ ತಾಳಮದ್ದಳೆ ಜರುಗಿತು..ನ.2 .ರಂದು ಪಂಜ ಪಂಚಲಿಂಗೇಶ್ವರ ದೇವಳದ ಪಾರ್ವತಿ ಸಭಾಭವನದಲ್ಲಿ ‘ರುಕ್ಮಾಂಗದ ಮೋಹಿನಿ.ನ.3 .ರಂದು ಬಳ್ಳಕ ಹರಿಪುರ ಶಾಲಾ ವಠಾರದಲ್ಲಿ ‘ಶರಸೇತು ಬಂಧನ’.ನ.4 .ರಂದು ಪಾಂಡಿಗದ್ದೆ ಶಾಲಾ ವಠಾರದಲ್ಲಿ ‘ದಕ್ಷಯಜ್ಞ’.ನ.6 .ರಂದು ಕಲ್ಮಡ್ಕ ಕಾಚಿಲ ಶ್ರೀ ವಿಷ್ಣುಮೂರ್ತಿ ಸಭಾಭವನದಲ್ಲಿ ‘ಅಂಗದ ಸಂಧಾನ’.ನ.5 .ರಂದು ಬೀದಿಗುಡ್ಡೆ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದಲ್ಲಿ ‘ಮೋಕ್ಷ ಸಂಗ್ರಾಮ’.ನ.7 .ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ಸಮರೋಪ ಸಮಾರಂಭ ‘ಶ್ರೀ ಕೃಷ್ಣ ಸಂಧಾನ’ ಪ್ರಸಂಗ ಪ್ರದರ್ಶನ ಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.