ಊರುಬೈಲು : ದೀಪಾವಳಿ ಕ್ರೀಡಾಕೂಟ ಮತ್ತು ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

Urubail deepavali  7ಊರುಬೈಲು ಕುಟುಂಬದ ವತಿಯಿಂದ 3 ನೇ ವರ್ಷದ ದೀಪಾವಳಿ ಕ್ರೀಡಾಕೂಟವು ನಿಡಿಂಜಿ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಊರುಬೈಲು ಗಣಪತಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

Urubail deepavali  3 ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಜಯರಾಮ ಯು.ಕೆ. ರವರು ವಹಿಸಿದ್ದರು. ವೇದಿಕೆಯಲ್ಲಿ ಚಿದಾನಂದ ನಿಡಿಂಜಿ, ತೀರ್ಪುಗಾರರಾದ ಸುಳ್ಯದ ಜೂನಿಯರ್ ಕಾಲೇಜು ಉಪನ್ಯಾಸಕರಾದ ನಟರಾಜ, ಚಂದ್ರಶೇಖರ್, ಕುಟುಂಬದ ಹಿರಿಯರಾದ ಎನ್.ಪಿ. ಶೇಷಪ್ಪ, ಎಂ.ಆರ್.ಗಿರಿಯಪ್ಪ, ಧರ್ಮಪಾಲ ವೇದಿಕೆಯಲ್ಲಿದ್ದರು. ಶ್ರೀಮತಿ ನೀತಾ ಪ್ರಾರ್ಥಿಸಿದರು. ಲೋಕೇಶ್ ಊರುಬೈಲು ಸ್ವಾಗತಿಸಿ, ಹರೀಶ್ ಊರುಬೈಲು ಧನ್ಯವಾದಗೈದರು. ಪ್ರಶಾಂತ್ ಊರುಬೈಲು ಕಾರ್ಯಕ್ರಮ ನಿರೂಪಿಸಿದರು.

Urubail deepavali
ನಂತರ ದೀಪಾವಳಿ ಪ್ರಯುಕ್ತ ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ, ವಿವಿಧ ವಯೋಮಾನದವರಿಗಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಲ್ಲಿನಿಂದ ತೆಂಗಿನಕಾಯಿ ಸುಲಿಯುವುದು, ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಕಬಡ್ಡಿ, ಮಕ್ಕಳನ್ನು ಅಡಿಕೆ ಹಾಳೆಯಲ್ಲಿ ಎಳೆಯುವುದು, ನಿಧಾನವಾಗಿ ಬೈಕ್ ಚಾಲನೆ ಮೊದಲಾದ ಸ್ಪರ್ಧೆಗಳು ನಡೆದವು.

Urubail deepavali  2
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕ್ರೀಡಾರತ್ನ ಪ್ರಶಸ್ತಿ ಪಡೆದ ಸುಮಿತಾ ಊರುಬೈಲುರವರನ್ನು ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.