ಏರ್ ಇಂಡಿಯಾದಲ್ಲಿ 300 ಕ್ಯಾಬಿನ್ ಕ್ರೂ ಹುದ್ದೆಗಳು

Advt_NewsUnder_1
Advt_NewsUnder_1
Advt_NewsUnder_1

ಏರ್ ಇಂಡಿಯಾವು ಭಾರತದ ನ್ಯಾಷನಲ್ ಕೆರಿಯರ್‌ನ ಒಂದು ಭಾಗವಾಗಿರುವ ಏರ್ ಇಂಡಿಯಾದಲ್ಲಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 3೦೦ ಟ್ರೈನಿ ಕ್ಯಾಬಿನ್ ಕ್ರೂ ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ದಕ್ಷಿಣ ವಲಯಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಕಾರ್ಯ ನಿರ್ವಹಿಸಬೇಕಾದ ಸ್ಥಳ : ಚೆನ್ನೈ , ಬೆಂಗಳೂರು , ಹೈದರಾಬಾದ್
ವಿದ್ಯಾರ್ಹತೆ : ದ್ವಿತೀಯ ಪಿ.ಯು.ಸಿ ಉತ್ತೀರ್ಣ ( ಪದವಿ /ಡಿಪ್ಲೊಮಾ ಇನ್ ಹೊಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದವರಿಗೆ ಆದ್ಯತೆ ನೀಡಲಾಗುವುದು)
ಅಭ್ಯರ್ಥಿಗಳು ಇಂಗ್ಲೀಷ್ ಮತ್ತು ಹಿಂದಿ ಭಾಷಾ ಜ್ಞಾನವನ್ನು ಹೊಂದಿರಬೇಕು
ವಯೋಮಿತಿ : ಕನಿಷ್ಟ 18  ವರ್ಷ ಹಾಗೂ ಗರಿಷ್ಟ 27 ವರ್ಷ (ಎಸ್.ಟಿ/ಎಸ್.ಸಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಹಾಗೂ ಒ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ೦3 ವರ್ಷ ಸಡಿಲಿಕೆಯನ್ನು ನೀಡಲಾಗಿದೆ)
ಎತ್ತರ : ಮಹಿಳೆಯರು – 160 ಸೆಂ.ಮೀ , ಪುರುಷರು 172 ಸೆಂ.ಮೀ
ಆಯ್ಕೆ ವಿಧಾನ : ಅಭ್ಯರ್ಥಿಗಳ ಆಯ್ಕೆಯು ಗ್ರೂಪ್ ಡೈನಾಮಿಕ್ಸ್ ಅಂಡ್ ಪರ್ಸೊನಲ್ ಅಸೆಸ್‌ಮೆಂಟ್ ಟೆಸ್ಟ್‌ನ ಮೂಲಕ ಆಯ್ಕೆ ಮಾಡಲಾಗುವುದು
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಗಳನ್ನು ಏರ್ ಇಂಡಿಯಾ
ವೆಬ್‌ಸೈಟ್‌ನ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ
ಅರ್ಜಿ ಸಲ್ಲಿಸುವಾಗ ಹೊಂದಿರಬೇಕಾದ ದಾಖಲೆಗಳು :
*ಚಾಲ್ತಿಯಲ್ಲಿರುವ ಇ-ಮೇಲ್ ಐ.ಡಿ
*ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
*ವೈದ್ಯರಿಂದ ಪಡೆದುಕೊಂಡ ವೈದ್ಯಕೀಯ ಪ್ರಮಾಣ ಪತ್ರ
*ಜಾತಿ ಪ್ರಮಾಣ ಪತ್ರಗಳು
ಅರ್ಜಿ ಶುಲ್ಕ : 1೦೦೦/- (ಅರ್ಜಿ ಶುಲ್ಕವನ್ನು AIR INDIA LIMITED, payable at Chennai . ಇವರ ಹೆಸರಿಗೆ ಸಂದಾಯವಾಗುವಂತೆ ಡಿ.ಡಿ ಮಾಡತಕ್ಕದ್ದು) ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಅನ್ವಯವಾಗುವುದಿಲ್ಲ.
ತರಬೇತಿ : ಆಯ್ಕೆಯಾದ ಅಭ್ಯರ್ಥಿಗಳಿಗೆ ಹೈದರಾಬಾದ್ / ಮಂಬೈ ನಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ರೂ೧೫,೦೦೦/- ಭತ್ಯೆಯನ್ನು ನೀಡಲಾಗುವುದು.
ಅವಧಿ : ಅಭ್ಯರ್ಥಿಗಳನ್ನು 5 ವರ್ಷದ ಅವಧಿಗೆ ಆಯ್ಕೆಗೊಳಿಸಲಾಗುವುದು.ಅಭ್ಯರ್ಥಿಗಳ ಕಾರ್ಯ ನಿರ್ವಹಣೆ ನೋಡಿ ಕಂಪೆನಿಯ ಅವಶ್ಯಕತೆಗೆ ಅನುಗುಣವಾಗಿ ಕೆಲಸದ ಅವಧಿಯನ್ನು ವಿಸ್ತರಿಸಲಾಗುವುದು.
ಸೂಚನೆ : ವೈದ್ಯಕೀಯ ಪ್ರಮಾಣ ಪತ್ರದ ಪ್ರತಿಯನ್ನು ಏರ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 08-11-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.