ವಿಶ್ವ ತುಳುವೆರೆ ಆಯನೊದ ತುಳು ತೇರು ಸುಳ್ಯಕ್ಕೆ ಆಗಮನ

Vishwa thuvera ayona karyakarma  1ಸುಳ್ಯ: ಡಿಸೆಂಬರ್ 9 ರಿಂದ 12  ರವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಯಶಸ್ವಿಗಾಗಿ ತುಳು ತೇರು ಸಂಚರಿಸುತ್ತಿದ್ದು, ಬುಧವಾರ ಸುಳ್ಯಕ್ಕೆ ಆಗಮಿಸಿತು.

Vishwa thuvera ayona karyakarma
ಸಂಜೆ ಜ್ಯೋತಿ ವೃತ್ತದ ಬಳಿ ರಥವನ್ನು ಸ್ವಾಗತಿಸಿ, ಬಳಿಕ ಮೆರವಣಿಗೆಯ ಮೂಲಕ ಸಾಗಿ ಬಂದು ಖಾಸಗಿ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯದ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು, ತುಳು ಅಭಿಮಾನಿಗಳು ಭಾಗವಹಿಸಿದ್ದರು. ರಥವನ್ನು ಆರತಿ ಎತ್ತಿ ತೆಂಗಿನ ಕಾಯಿ ಒಡೆದು ಸ್ವಾಗತಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಡಾ. ಎನ್. ಎ. ಜ್ಞಾನೇಶ್, ಎಂ.ಮೀನಾಕ್ಷಿ ಗೌಡ, ಪಿ.ಬಿ.ದಿವಾಕರ ರೈ, ಕಟ್ಟೆ ಅಬ್ಬಾಸ್ ಹಾಜಿ, ಕೃಷ್ಣಪ್ರಸಾದ್ ಮಡ್ತಿಲ, ಚಂದ್ರ ಕೋಲ್ಚಾರು, ಕೆ.ಎಂ.ಮುಸ್ತಫ, ಎಸ್. ಸಂಶುದ್ಧೀನ್, ಶಶಿಕಲಾ ನೀರಬಿದಿರೆ, ಜೂಲಿಯಾನಾ ಕ್ರಾಸ್ತಾ, ಡಾ.ಪೂವಪ್ಪ ಕಣಿಯೂರು, ಬೂಡು ರಾಧಾಕೃಷ್ಣ ರೈ, ಎ.ಟಿ.ಕುಸುಮಧರ, ನಂದರಾಜ್ ಸಂಕೇಶ, ಪದ್ಮನಾಭ ಶೆಟ್ಟಿ, ದೊಡ್ಡಣ್ಣ ಬರಮೇಲು ಮೊದಲಾದವರು ಭಾಗವಹಿಸಿದ್ದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎನ್.ಎ ರಾಮಚಂದ್ರ, ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕಾರ್ಯದರ್ಶಿ ಕೆ.ಟಿ.ವಿಶ್ವನಾಥ್, ಉಪಾಧ್ಯಕ್ಷ ದೇವರಾಜ್ ಆಳ್ವ , ಮಹೇಶ್ ರೈ ಮೇನಾಲ ನೇತೃತ್ವ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.