ಬೊಮ್ಮಾರು : ದೀಪಾವಳಿ ಸಂಭ್ರಮ, ಗೋಪೂಜೆ, ಕ್ರೀಡಾ ಕೂಟ, ಸನ್ಮಾನ, ಅದ್ದೂರಿ ರಸಮಂಜರಿ ಕಾರ್ಯಕ್ರಮ

ಮರ್ಕಂಜದ ಬೊಮ್ಮಾರು ಶ್ರೀ ಗಜಾನನ ಮಿತ್ರ ಮಂಡಳಿ ವತಿಯಿಂದ ದೀಪಾವಳಿ ಸಂಭ್ರಮ, ಕ್ರೀಡಾಕೂಟ, ಗೋಪೂಜೆ, ಸನ್ಮಾನ ಕಾರ್ಯಕ್ರಮವು ಅ.30 ಮತ್ತು 31ರಂದು ಬೊಮ್ಮಾರು ಶ್ರಿ ಮೂವರ್ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಅ.30ರಂದು ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ಧಮಠ ಮರ್ಕಂಜ ಇಲ್ಲಿಯ ರಾಜೇಶ್ ನಾಥ್ ಜಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬೊಮ್ಮಾರು ಮೂವರ್ ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಗಣೇಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಮರ್ಕಂಜ ಗ್ರಾ.ಪಂ. ಸದಸ್ಯ ಆನಂದ ಬಾಣೂರು ಆಗಮಿಸಿದ್ದರು. ಬಳಿಕ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಗ್ರಾಮದ ಪುರುಷರಿಗೆ ಕಬಡ್ಡಿ ಪಂದ್ಯಾಟ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.

Bommaru  dipavali acharane 1 copy
ಅ.31ರಂದು ಶ್ರೀ ಮೂವರ್ ದೈವಗಳಿಗೆ ಮತ್ತು ಉಪದೈವಗಳಿಗೆ ತಂಬಿಲ ಸೇವೆ ನಡೆಯಿತು. ಮಧ್ಯಾಹ್ನದ ಬಳಿಕ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.
ರಾತ್ರಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮರ್ಕಂಜ ಗ್ರಾ.ಪಂ.ನ ಅಧ್ಯಕ್ಷ ಮೋನಪ್ಪ ಪೂಜಾರಿ ವಹಿಸಿದ್ದರು. ಅತಿಥಗಳಾಗಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಎ.ಟಿ.ಕುಸುಮಾಧರ, ಸಾಹಿತಿ ಕೃ.ಶಾ.ಮರ್ಕಂಜ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೈನಲ್ ಹಂತಕ್ಕೆ ತಲುಪಿದ್ದ ತುಷಾರ್ ಗೌಡನನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶ್ರೀ ಗಜಾನನ ಮಿತ್ರ ಮಂಡಳಿ ಬೊಮ್ಮಾರು ಇದರ ಅಧ್ಯಕ್ಷ ದಿನೇಶ್ ಬೊಮ್ಮಾರು, ತುಷಾರ್ ಗೌಡನ ತಂದೆ ವಿಜಯ ಮಯೂರಿ ತಾಯಿ ರೂಪಾ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದ ಪ್ರಯೋಜಕರಿಂದ ಬಹುಮಾನ ವಿತರಿಸಲಾಯಿತು. ಬಳಿಕ ಸಿಂಚನ್ಸ್ ಆರ್ಕೆಸ್ಟ್ರಾ ಮಂಗಳೂರು ಇವರಿಂದ ಅದ್ದೂರಿ ರಸಮಂಜರಿ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ತುಷಾರ್ ಗೌಡ ಡ್ರಾಮಾ ಜ್ಯೂನಿಯರ್‍ ನಲ್ಲಿ ಅಭಿನಯಿಸಿದ ಅಜ್ಜಿಯ ಪಾತ್ರ ಮತ್ತು ನೃತ್ಯ ಮಾಡಿದರು. ಸಮಾರೋಪ ಸಮಾರಂಭದ ಮೊದಲು ಗೋಪೂಜೆ ನಡೆಯಿತು. ದೇವಪ್ಪ ಹೈದಂಗೂರು ಪ್ರಸ್ತಾವಿಕ ಮಾತನಾಡಿದರು. ಮನಮೋಹನ ಎರ್ಮೆಟ್ಟಿ ಸ್ವಾಗತಿಸಿ, ಐತ್ತ ರೆಂಜಾಳ ವಂದಿಸಿದರು. ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು. ದೀಪಾವಳಿ ಸಂಭ್ರಮದ ಪ್ರಯುಕ್ತ ವಿಶೇಷ ಸಿಡಿಮದ್ದಿನ ಪ್ರದರ್ಶನ ನಡೆಯಿತು.
ಕಾರ್ಯಕ್ರಮಕ್ಕೆ ನಾಗಶ್ರೀ ಗೆಳೆಯರ ಬಳಗ ತುಂಬೆತ್ತಡ್ಕ, ಊರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.