ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜನಾರ್ಧನ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪೋಷಕರ ಜವಬ್ಧಾರಿಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಗಂಗಾಧರ ಗೌಡ, ಗೌರವ ಸಲಹೆಗಾರರಾದ ಗಫೂರ್ ಸಾಹೇಬ್ ಪಾಲ್ತಾಡ್, ಶಿವಪ್ಪ ನಾಯ್ಕ, ಸುಶೀಲಾ, ಉಪನ್ಯಾಸಕರುಗಳಾದ ಪ್ರಸಾದ್ ಎಸ್, ಗಣೇಶ್ ನಾಯಕ್, ತೀರ್ಥಾನಂದ ಕಲ್ಮಡ್ಕ, ಸರಸ್ವತಿ, ಪಲ್ಲವಿ, ಹಿರಿಯ ಶಿಕ್ಷಕ ಮಹಮ್ಮದ್ ಉಪಸ್ಥಿತರಿದ್ದರು.