ಕೃಷಿ-ಗ್ರಾಮೀಣ-ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿಗೆ ಅರ್ಜಿ ಆಹ್ವಾನ

 

ಕೃಷಿ ಮಾಧ್ಯಮ ಕೇಂದ್ರ ಒಂದು ವರ್ಷ ಅವಧಿಯ ಕೃಷಿ-ಗ್ರಾಮೀಣ-ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿಯನ್ನು ಪುನರಾರಂಭಿಸಲು ನಿರ್ಧರಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಲೇಖನ ಬರೆಯಲು ವಿಷಯದ ಆಯ್ಕೆಯಿಂದ ಹಿಡಿದು ಕ್ಷೇತ್ರಭೇಟಿ, ಸಂದರ್ಶನ ವಿಧಾನ, ಛಾಯಾಗ್ರಹಣ, ನುಡಿಚಿತ್ರ ಬರವಣಿಗೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.

ಪ್ರಸಕ್ತ ಕಾಲಮಾನಕ್ಕೆ ಅನುಗುಣವಾಗಿ ತರಬೇತಿಯನ್ನು ಪುನರ್‌ವಿನ್ಯಾಸಗೊಳಿಸಲಾಗಿದೆ. ಇಮೇಲ್ ಹಾಗೂ ವಾಟ್ಸಪ್ ಬಳಕೆಗೆ ಆದ್ಯತೆ ನೀಡಲಾಗಿದ್ದು ಇಡೀ ಕೋರ್ಸ್ ಸಂಪೂರ್ಣ ಕಾಗದರಹಿತವಾಗಿರುತ್ತದೆ. ಸೂಕ್ತ ತರಬೇತಿಯ ಮೂಲಕ ಕೃಷಿ-ಗ್ರಾಮೀಣ ರಂಗದ ಕುರಿತು ನೈಜ ಕಾಳಜಿ ಹೊಂದಿರುವ ಪತ್ರಕರ್ತರನ್ನು ರೂಪಿಸುವುದು ಕೇಂದ್ರದ ಉದ್ದೇಶ. ಯಶಸ್ವಿ ಅಭ್ಯರ್ಥಿಗಳನ್ನು ಕಾಮ್ ಫೆಲೋಗಳೆಂದು ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.10.2016

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.