ಪ್ರವಾಸಿಗರನ್ನು ಆಕರ್ಷಿಸುವ ಸೋಣಂಗೇರಿಯ ಮಿನಿ ಜಲಪಾತ

Advt_NewsUnder_1
Advt_NewsUnder_1

ಮಳೆಗಾಲದಲ್ಲಿ ಸಣ್ಣಪುಟ್ಟ ತೊರೆಗಳು ಎತ್ತರದಿಂದ ಧುಮುಕುವಲ್ಲಿ ಜಲಪಾತಗಳನ್ನು ಸೃಷ್ಟಿಸುತ್ತವೆ. ಇಂತಹದೊಂದು ಸಣ್ಣ ಜಲಪಾತ ಸೋಣಂಗೆರಿಯಲ್ಲಿದ್ದು, ಸುಳ್ಯ ಬೆಳ್ಳಾರೆ ರಸ್ತೆಯಲ್ಲಿ ಸಾಗುವವರನ್ನು ತನ್ನತ್ತ ಆಕರ್ಷಿಸುತ್ತಿದೆ.

ಸೋಣಂಗೇರಿಯಿಂದ ಬೆಳ್ಳಾರೆ ರಸ್ತೆಯಲ್ಲಿ ಕೇವಲ ಅರ್ಧ ಕಿ.ಮೀ. ದೂರ ಕ್ರಮಿಸುವಾಗ ರಸ್ತೆಗೆ ಹೊಂದಿಕೊಂಡೇ ಆಕರ್ಷಕ ಜಲಪಾತ ಎಲ್ಲರ ಗಮನ ಸೆಳೆಯುತ್ತದೆ. ಖಾಸಗಿ ಜಮೀನಿನ ಮಧ್ಯದಲ್ಲಿ ಇದು ಧುಮುಕುವುದರಿಂದ ಇಲ್ಲಿ ಕೆಳಗೆ ಇಳಿದು ನಿಸರ್ಗ ಸೌಂದರ್ಯವನ್ನು ನೋಡುವ ಅವಕಾಶವಿಲ್ಲ. ಆದರೆ ಸುಮಾರು ೫೦ ಅಡಿ ಎತ್ತರದಿಂದ ಮೂರು ಹಂತಗಳಲ್ಲಿ ದುಮ್ಮಿಕ್ಕುವ ಜಲಪಾತದ ಸೌಂದರ್ಯ ರಸ್ತೆ ಬದಿಯಿಂದಲೇ ವೀಕ್ಷಿಸಬಹುದು. ಬಂಡೆಗಳ ಮೇಲಿನಿಂದ ನೀರು ಧುಮ್ಮಿಕ್ಕುವಾಗ ಬಿಳಿ ಹಾಲಿನಂತೆ ಗೋಚರಿಸುತ್ತದೆ. ಮಳೆ ಜೋರಾಗಿ ಬಂದಾಗ ಹೆಚ್ಚು ನೀರು ಬಂದು ಜಲಪಾತ ಆಕರ್ಷಕವಾಗಿ ಕಾಣುತ್ತದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.