ಪರಿಸರದಿಂದಲೇ ಮುನುಷ್ಯನ ಉಳಿವು. ಪರಿಸರ ನಾಶವಾದರೆ ಮನುಷ್ಯನೂ ಕಾಲಕ್ರಮೇಣ ನಾಶವಾಗುತ್ತಾನೆ. ಹೀಗಾಗಿ ಅರಣ್ಯ ಉಳಿಯಬೇಕು. ಇದಕ್ಕಾಗಿ ಸರ್ಕಾರದ ಕೆಲವು ನಿಯಮಗಳೂ ಬದಲಾಗಬೇಕು ಎಂದು ಶಾಸಕ ಎಸ್.ಅಂಗಾರ ಹೇಳಿದರು.
ಅವರು ಜು.6 ರಂದು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಅರಣ್ಯ ಇಲಾಖೆ ಆಶ್ರಯದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ನಡೆದ ಕೋಟಿವೃಕ್ಷ ಆಂದೋಲನ ಉದ್ಘಾಟಿಸಿ ಮಾತನಾಡಿದರು. ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತಳೂರು ಅಧ್ಯಕ್ಷತೆ ವಹಿಸಿದ್ದರು. ಪ್ರಾಸಾಸ್ತಾವಿಕವಾಗಿ ಮಾತನಾಡಿದ ಎ.ಪಿ.ಎಫ್. ಜಗನ್ನಾಥ್, ಮಣ್ಣಿಗೆ ಹಸಿರಹೊದಿಕೆ ಬೇಕಾಗಿದೆ. ಇದಕ್ಕಾಗಿ ಈ ಬಾರಿ ಕೋಟಿ ವೃಕ್ಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಭೂಮಿಯನ್ನು ಶೇ.೩೩ರಷ್ಟು ಅರಣ್ಯ ಬೇಕಾಗಿದೆ. ಆದರೆ ಇದರ ಅಸಮತೋಲನದಿಂದಾಗಿ ಇಂದ ಸಮಸ್ಯೆಯಾಗಿದೆ. ಇದಕ್ಕಾಗಿ ಇಂದು ಅನಿವಾರ್ಯವಾಗಿ ಪರಿಸರ ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಹರೀಶ್ ಕಂಜಿಲಿಪಿ, ಆರ್.ಎಫ್.ಒ ಪ್ರಶಾಂತ್ ಕುಮಾರ್ ರೈ, ಸಿ.ಆರ್.ಪಿ ಚಂದ್ರಶೇಖರ ಪಾರೆಪ್ಪಾಡಿ, ಗ್ರಾಪಂ ಸದಸ್ಯ ಕೃಷ್ಣಯ್ಯ ಮೂಲೆತೋಟ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ವಿವಿಧ ಬಗೆಯ ಸಸಿಗಳನ್ನು ವಿತರಣೆ ಮಾಡಿತು. ಜ್ಞಾನದೀಪ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಸ್ವಾಗತಿಸಿ ಶಾಲಾ ವಿದ್ಯಾರ್ಥಿ ನಾಯಕಿ ಕೃತಿ ವಂದಿಸಿದರು.ಶಿಕ್ಷಕಿಯರಾದ ಗೀತಾ ಹಾಗೂ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.