ಪೇರಡ್ಕ ತಖ್‌ವೀಯತುಲ್ ಇಸ್ಲಾಂ ಮದ್ರಸಕ್ಕೆ ಶೇ.೧೦೦ ಫಲಿತಾಂಶ.

Advt_NewsUnder_1
Advt_NewsUnder_1
Advt_NewsUnder_1

suddi logoಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಇದರ ಅಧೀನದಲ್ಲಿ ನಡೆದ 2015-16 ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ರೇಂಜ್‌ನ ಪೇರಡ್ಕ ತಖ್ ವೀಯತುಲ್ ಇಸ್ಲಾಂ ಮದ್ರಸಕ್ಕೆ ಶೇ 100 ಫಲಿತಾಂಶ ಲಭಿಸಿದೆ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಗೂನಡ್ಕಕ್ಕೆ 92 ಶೇ. ಫಲಿತಾಂಶ ದಾಖಲಾಗಿದೆ.
ಪೇರಡ್ಕ ಮದ್ರಸದಲ್ಲಿ 5 ನೇ ತರಗತಿಯಲ್ಲಿ ಪರೀಕ್ಷೆಗೆ ಹಾಜರಾಗಿ ಒಂದು ವಿದ್ಯಾರ್ಥಿ ತೇರ್ಗಡೆಗೊಂಡು 100  ಶೇ ಫಲಿತಾಂಶ ಲಭಿಸಿದೆ. ಗೂನಡ್ಕ ಮದ್ರಸದಲ್ಲಿ 5 ನೇ ತರಗತಿಯಿಂದ ಪರೀಕ್ಷೆಗೆ ಹಾಜರಾದ ೫ ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಹಾಗೂ 7ನೇ ತರಗತಿಯಲ್ಲಿ 6 ರಲ್ಲಿ 6 ವಿದ್ಯಾರ್ಥಿಗಳು ಮತ್ತು 10ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಯು ಪರೀಕ್ಷೆ ಬರೆದು ತೇರ್ಗಡೆಗೊಂಡು 62 ಶೇ. ಫಲಿತಾಂಶ ಲಭಿಸಿದೆ.
ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಅಧ್ಯಾಪಕರಾದ ಝಕರಿಯಾ ದಾರಿಮಿ ಹಾಗೂ ಇಬ್ರಾಹಿಂ ಖಲೀಲ್ ಫೈಝಿ ಇವರನ್ನು ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಪೇರಡ್ಕ ಗೂನಡ್ಕ ಜಮಾಅತ್ ಅಧ್ಯಕ್ಷರಾದ ಆಲಿಹಾಜಿ, ಗೌರವಾಧ್ಯಕ್ಷರಾದ ಟಿ.ಎಂ ಶಹೀದ್‌ರವರು ಅಭಿನಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.