ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

2016-17 ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೆಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಐ.ಎ.ಎಸ್, ಕೆ.ಎ.ಎಸ್. ಮತ್ತು ಎ&ಬಿ ವೃಂದದ ಹುದ್ದೆಗಳಿಗೆ ನೆಡೆಯುವ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡಿ ಉಚಿತವಾಗಿ 7-9 ತಿಂಗಳ ತರಬೇತಿಯನ್ನು ನೀಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಐ.ಎ.ಎಸ್, ಕೆ.ಎ.ಎಸ್. ಮತ್ತು ಎ&ಬಿ ವೃಂದದ ಹುದ್ದೆಗಳಿಗೆ ನೆಡೆಯುವ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸದರಿ ಅಭ್ಯರ್ಥಿಗಳಿಗೆ ಶಿಷ್ಯವೇತನವನ್ನು ಸರ್ಕಾರದಿಂದ ಮಂಜೂರಾದ ದರದಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು.
ಕೋರ್ಸ್‌ನ ವಿವರ ಕೇಂದ್ರ/ರಾಜ್ಯ ಲೋಕ ಸೇವಾ ಆಯೋಗವು ನೆಡೆಸುವ (ಐ.ಎ.ಎಸ್, ಕೆ.ಎ.ಎಸ್. ಮತ್ತು ಎ&ಬಿ ವೃಂದದ ಹುದ್ದೆಗಳಿಗೆ) 2016 ನೇ ಸಾಲಿನ ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವಭಾವಿ ತರಬೇತಿ.
ತರಬೇತಿ ಅವಧಿ 7-9 ತಿಂಗಳು
ವಯಸ್ಸು 21 ರಿಂದ 25 ವರ್ಷ
ವಿದ್ಯಾರ್ಹತೆ ಅಭ್ಯರ್ಥಿಯು ಪದವಿಯಲ್ಲಿ ಉತ್ತೀರ್ಣರಾಗಿರಬೇಕು
ಅಭ್ಯರ್ಥಿಯ ಸ್ವಂತ ಸ್ಥಳ ಕರ್ನಾಟಕ ರಾಜ್ಯದವರಾಗಿರಬೇಕು
ಷರತ್ತು ಅಭ್ಯರ್ಥಿಯು ಐ.ಎ.ಎಸ್, ಕೆ.ಎ.ಎಸ್. ಮತ್ತು ಎ&ಬಿ ವೃಂದದ ಹುದ್ದೆಗಳಿಗೆ ನೆಡೆಯುವ ಪರೀಕ್ಷೆಗಳಿಗೆ ವಿಧಿಸುವ ಎಲ್ಲಾ ನಿಬಂಧನೆಗಳನ್ನು ಪೂರೈಸತಕ್ಕದ್ದು
ವಾರ್ಷಿಕ ಆದಾಯ ಅಭ್ಯರ್ಥಿಯ ಹಾಗೂ ಆತನ /ಆಕೆಯ ತಂದೆ, ತಾಯಿ, ಪೋಷಕರ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ, ಪುರುಷರು- ರೂ 3.50 ಲಕ್ಷ ಹಾಗೂ ಮಹಿಳೆಯರು ರೂ. 4.50ಲಕ್ಷ ಮೀರಿರಬಾರದು.
ಆಯ್ಕೆ ವಿಧಾನ ಅಭ್ಯರ್ಥಿಯು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೇರಿಟ್ ಆಧಾರದ ಮೇಲೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಲಭ್ಯವಿರುವ ಸೀಟುಗಳ ಆಧಾರದ ಮೇಲೆ ಆಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 05-06-2016
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ
ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.