ಬೆಳ್ಳಾರೆ ಕಮ್ಯುನಿಟಿ ಪಾಲಿಟೆಕ್ನಿಕ್‌ನಲ್ಲಿ ಪ.ಜಾತಿ ಮತ್ತು ಪ.ಪಂ.ದವರಿಗೆ ಉಚಿತ ವಿವಿಧ ಬಗೆಯ ವೃತ್ತಿ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಮತ್ತು ಕಮ್ಯು ನಿಟಿ ಪಾಲಿಟೆಕ್ನಿಕ್ ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ಪ.ಜಾತಿ ಮತ್ತು ಪ.ಪಂದ ನಿರುದ್ಯೋಗಿ ಯುವಕ ಮತ್ತು ಯು ತಿಯರಿಗೆ ವಿವಿದ ಬಗೆಯ ಉಚಿತ ವೃತ್ತಿ ಕೌಶಲ್ಯ ತರಬೇತಿಯನ್ನು ಆಯೋ ಜಿಸಲಾಗಿದೆ. ಈ ತರಬೇತಿಯು ಸಂಪೂ ರ್ಣವಾಗಿ ಉಚಿತವಾಗಿದ್ದು ಯವುದೇ ತರಬೇತಿ ಶುಲ್ಕವಿರುವುದಿಲ್ಲ. ತರಬೇತಿಯ ನಂತರ ಭಾರತ ಸರ್ಕಾರದ ಎನ್.ಸಿ.ವಿ.ಟಿ ಪ್ರಮಾಣ ಪತ್ರ ಕರ್ನಾ ಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾ ಖೆಯ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ತರಬೇತಿಯಲ್ಲಿ ಬೇಸಿಕ್ ಕಂಪ್ಯೂಟರ್ ಅಪ್ಲಿಕೇಶನ್, ಪ್ಯಾಷನ್ ಡಿಸೈನಿಂಗ್, ಸ್ಪೋಕನ್ ಇಂಗ್ಲಿಷ್ ಹಾಗೂ ವಿವಿದ ಬಗೆಯ ತರಬೇತಿ ಯನ್ನು ಆಯೋಜಿಸಲಾಗಿದೆ. ಆಸಕ್ತ ಕನಿಷ್ಟ 16 ವರ್ಷ ವಯೋಮಿತಿಯೊಳಗಿನ ಹಾಗೂ 8ನೇ ತರಗತಿ ಮತ್ತು ೧೦ನೇ ತರಗತಿಯಿ೦ದ ಹೆಚ್ಚು ಶೈಕ್ಷಣಿಕ ವಿದ್ಯಾರ್ಹತೆ ಹೊದಿರುವ ಪ.ಜಾತಿ ಮತ್ತು ಪ.ಪಂದ ವರ್ಗದ ನಿರುದ್ಯೋಗಿ ಯುವಕ ಮತ್ತು ಯುವತಿಯರು ಈ ತರಬೇತಿಯನ್ನು ಪಡೆದುಕೊಳ್ಳ ಬಹುದು. ಪರಿಸರದ ಜನತೆ ಭಾರತ ಸರ್ಕಾರದ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹು ದಾಗಿದೆ. ತರಬೇತಿಯು ಏಪ್ರಿಲ್ ತಿಂಗಳ ಕೊನೇಯ ವಾರದಲ್ಲಿ ಪ್ರಾರಂಭವಾಗಲಿದೆ. ಆಸಕ್ತರು ತಮ್ಮ ಇತ್ತೀಚಿನ 7 ಭಾವಚಿತ್ರ, ಪಡಿತರ ಚೀಟಿ ನಕಲು ಪ್ರತಿ,ಅಧಾರ್ ಕಾರ್ಡ್ ನಕಲು ಪ್ರತಿ, ಜಾತಿ ಪ್ರಮಾಣ ಪತ್ರದ ನಕಲು ಪ್ರತಿ ಮತ್ತು ಶೈಕ್ಷಣಿಕ ವಿದ್ಯಾರ್ಹತೆಯ ನಕಲು ಪ್ರತಿಗಳ ಜೊತೆಗೆ ಪ್ರಾಂಶುಪಾಲರು, ಕಮ್ಯುನಿಟಿ ಪಾಲಿಟೆಕ್ನಿಕ್ ಉಚಿತ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಶಾಹಿನ್ ಮಹಲ್, ಎರಡನೇ ಮಹಡಿ, ವಿಜಯಾ ಬ್ಯಾಂಕ್ ಕಟ್ಟಡ, ಪ್ರದಾನ ರಸ್ತೆ, ಬಸ್ಸು ನಿಲ್ದಾಣದ ಎದುರುಗಡೆ, ಬೆಳ್ಳಾರೆ, ಸುಳ್ಯ ತಾಲ್ಲೂಕು ಹಾಗೂ ಕಿಯಾನಿಕ್ಸ್, ಕೆಂಚಾಂಬಾ ಕೃಪಾ ಕಾಂಪ್ಲೆಕ್ಸ್, ಕೆ.ಎಸ್.ಎಸ್ ಕಾಲೇಜು ಸಮೀಪ, ಕುಕ್ಕೆಸುಬ್ರಹ್ಮಣ್ಯ ಇಲ್ಲಿಗೆ ನೇರವಾಗಿ ಸಂಪರ್ಕಿಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.