HomePage_Banner_
HomePage_Banner_
HomePage_Banner_

ಮಾ.23ರಂದು ಪ್ರಾಚ್ಯ ಸ್ಪರ್ಧೆ ಕಾರ್ಯಕ್ರಮ

ಪ್ರಾಚ್ಯ ಪ್ರಜ್ಞೆಯ ಬಗ್ಗೆ ಅರಿವು ಮೂಡಿಸಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆಯು ಆಯೋಜಿಸಿದೆ. ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯುವ ಈ ಸ್ಪರ್ಧೆಗಳನ್ನು ಮಾ.23ರಂದು 2 ಗಂಟೆಯಿಂದ ಗಾಂಧಿನಗರ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ನಡೆಸಲಾಗುವುದು.
ಭಾಷಣ, ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ, ಸ್ಪರ್ಧೆಗಳು ನಡೆಯಲಿದ್ದು ಪ್ರತಿ ಶಾಲೆಯಿಂದ ಎಲ್ಲಾ ಸ್ಪರ್ಧೆಗಳಿಗೆ ಒಬ್ಬರಂತೆ, ರಸಪ್ರಶ್ನೆಗೆ 2 ವಿದ್ಯಾರ್ಥಿಗಳ ತಂಡ ರಚಿಸಿ ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನ ರೂ.1000, ದ್ವಿತೀಯ ರೂ 500, ತೃತೀಯ ರೂ.200ರಂತೆ ಪ್ರತಿ ವಿಭಾಗಕ್ಕೆ ನೀಡಲಾಗುವುದು.
ಭಾಷಣದ ವಿಷಯ :ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯಗಳು, ಪ್ರಬಂಧ: ಸ್ಮಾರಕ ಪರಂಪರೆ ರಕ್ಷಣೆ ನಮ್ಮ ಹೊಣೆಗಾರಿಕೆ, ಚಿತ್ರಕಲೆ: ನಾನು ನೋಡಿದ ಐತಿಹಾಸಿಕ ಸ್ಥಳ-ನಮ್ಮ ರಾಜ್ಯದ ಮತ್ತು ಜಿಲ್ಲೆಯ ಕುರಿತಂತೆ, ರಸಪ್ರಶ್ನೆ: ಸ್ಮಾರಕಗಳು, ಹಬ್ಬಗಳು, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳು.
ಹೆಚ್ಚಿನ ಮಾಹಿತಿಗಾಗಿ ಕೋಟ್ಯಪ್ಪ ಪೂಜಾರಿ (೯೪೮೦೨೬೫೦೧೩), ಮುಖ್ಯೋಪಾಧ್ಯಾಯರು ಸ.ಮಾ.ಹಿ.ಪ್ರಾ. ಶಾಲೆ ಗಾಂಧಿನಗರ ಇವರನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.