ಆರ್.ಟಿ.ಇ.ಗೆ ಆನ್‌ಲೈನ್ ಮೂಲಕ ಅರ್ಜಿ: ತಾಲೂಕಿನ 12 ಶಾಲೆಗಳಲ್ಲಿ 143 ಸೀಟು ಮೀಸಲು

Advt_NewsUnder_1
Advt_NewsUnder_1
Advt_NewsUnder_1

ಫೆ.23ರಿಂದ ಅರ್ಜಿ ಸಲ್ಲಿಸಲು ಅವಕಾಶ: ಮಾ.15 ಕೊನೆಯ ದಿನ
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಈ ಬಾರಿ ತಾಲೂಕಿನ 12 ಶಾಲೆಗಳಲ್ಲಿ 143 ಸೀಟುಗಳು ಮೀಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ವ್ಯವಸ್ಥೆ ಮಾಡಲಾಗಿದೆ.
ಕೆ.ಎಸ್.ಜಿ. ಹೈಯರ್ ಪ್ರೈಮರಿ ಸ್ಕೂಲ್ ಪಂಜ ಇಲ್ಲಿ ಪೂರ್ವ ಪ್ರಾಥಮಿಕಕ್ಕೆ 11 ಸೀಟುಗಳು (ಎಸ್‌ಸಿ 3, ಎಸ್‌ಟಿ 1, ಇತರ 7), ವಿವೇಕಾನಂದ ಅಡ್ಪಂಗಾಯ ಇಲ್ಲಿ ಪೂರ್ವ ಪ್ರಾಥಮಿಕಕ್ಕೆ 5 ಸೀಟು (ಎಸ್‌ಸಿ 2, ಇತರ 3), ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ ಇಲ್ಲಿ 1ನೇ ತರಗತಿಗೆ 3 ಸೀಟು (ಎಸ್‌ಸಿ 1, ಇತರ 2), ಬೆಳ್ಳಾರೆ ದಾರುಲ್ ಹಿಕ್ಮಾ ಶಾಲೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 11 ಸೀಟು (ಎಸ್‌ಸಿ 3, ಎಸ್‌ಟಿ 1, ಇತರ 7), ಎಲಿಮಲೆ ಜ್ಞಾನದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 12 ಸೀಟು (ಎಸ್‌ಸಿ 4, ಎಸ್‌ಟಿ 1, ಇತರ 7), ಜಾಲ್ಸೂರು ಪಯನೀರ್ ಪಬ್ಲಿಕ್ ಸ್ಕೂಲ್ 1ನೇ ತರಗತಿಗೆ 3 ಸೀಟು (ಎಸ್‌ಸಿ 1, ಇತರ 2), ಕಲ್ಲುಗುಂಡಿ ಸವೇರಪುರ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕಕ್ಕೆ 12 ಸೀಟು (ಎಸ್‌ಸಿ 4, ಎಸ್‌ಟಿ 1, ಇತರ 7), ಸುಬ್ರಹ್ಮಣ್ಯ ಕುಮಾರಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕಕ್ಕೆ 12 ಸೀಟು (ಎಸ್‌ಸಿ 4, ಎಸ್‌ಟಿ 1, ಇತರ 7), ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಸುಳ್ಯ ಪೂರ್ವಪ್ರಾಥಮಿಕಕ್ಕೆ 28 ಸೀಟು (ಎಸ್‌ಸಿ 8, ಎಸ್‌ಟಿ 2, ಇತರ 18), ಕೆ.ವಿ.ಜಿ. ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ಕುರುಂಜಿಭಾಗ್ ಇಲ್ಲಿ ಪೂರ್ವ ಪ್ರಾಥಮಿಕಕ್ಕೆ 19 ಸೀಟು (ಎಸ್‌ಸಿ 6, ಎಸ್‌ಟಿ 1, ಇತರ 12), ರೋಟರಿ ವಿದ್ಯಾಸಂಸ್ಥೆ ಸುಳ್ಯ ಇಲ್ಲಿ ಪೂರ್ವಪ್ರಾಥಮಿಕಕ್ಕೆ 23 ಸೀಟು (ಎಸ್‌ಸಿ 7, ಎಸ್‌ಟಿ 1, ಇತರ 15), ಸ್ನೇಹ ವಿದ್ಯಾಸಂಸ್ಥೆ ಸುಳ್ಯದಲ್ಲಿ ಪೂರ್ವ ಪ್ರಾಥಮಿಕಕ್ಕೆ 4 ಸೀಟು (ಎಸ್‌ಸಿ 1, ಇತರ 3) ಹೀಗೆ ಒಟ್ಟು 143 ಸೀಟುಗಳು ಇವೆ.

ಈ ಬಾರಿ ಕಳೆದ ಬಾರಿಯಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಲಾಗಿದ್ದು, ಅರ್ಜಿ ಸಲ್ಲಿಸುವ ಪೋಷಕರು ಮಕ್ಕಳ ಪೂರ್ಣ ವಿವರದ ದಾಖಲೆಗಳನ್ನು ತೆಗೆದುಕೊಂಡು ತಾವು ಇಚ್ಛಿಸಿದ ಶಾಲೆಗೆ ಹೋದರೆ ಅಲ್ಲೇ ಆನ್‌ಲೈನ್ ಮಾಡಲಾಗುತ್ತದೆ. ಅಥವಾ ಇತರ ಕಡೆಯಲ್ಲಿಯೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಆನ್‌ಲೈನ್ ಮಾಡಿದ ವಿವರಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಿದ ಶಾಲೆಗಳಿಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಫೆ.23ರಿಂದ ಅವಕಾಶ ನೀಡಲಾಗಿದ್ದು, ಮಾ.15 ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಎ.6ರಂದು ಪ್ರಕಟಿಸಲಾಗುತ್ತದೆ.
ಒಂದು ಪೋಷಕರು ಮಗುವಿನ ಅರ್ಜಿಯನ್ನು 5 ಶಾಲೆಗಳಲ್ಲಿ ಸಲ್ಲಿಸಬಹುದು. ಆರ್.ಟಿ.ಇ. ಕಾಯ್ದೆಯಂತೆ ಪ್ರವೇಶ ಕೋರಲು ದಿನಾಂಕ 1.6.2016ರಲ್ಲಿದ್ದಂತೆ ಎಲ್.ಕೆ.ಜಿ. ತರಗತಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಮತ್ತು ೧ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳು ವಯೋಮಿತಿಯನ್ನು ಸರಕಾರ ನಿಗದಿಪಡಿಸಿದೆ. ಹೆಚ್ಚಿನ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.