ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ & ನೇವಲ್ ಅಕಾಡೆಮಿ ಪರೀಕ್ಷೆಗೆ ಅರ್ಜಿ ಆಹ್ವಾನ

ಕೇಂದ್ರಸರ್ಕಾರದ ಅಧೀನದಲ್ಲಿ ಬರುವ ಯೂನಿಯನ್ ಪಬ್ಲಿಕ್ ಸವೀಸ್ ಕಮಿಷನ್ ೨೦೧೬ ನೇ ಸಾಲಿನ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ & ನೇವಲ್ ಅಕಾಡೆಮಿ ಪರೀಕ್ಷೆಗೆ ಆಸಕ್ತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಒಟ್ಟು ೩೨೦ ಹುದ್ದೆಗಳು ಖಾಲಿ ಇದ್ದು
ಅವುಗಳಲ್ಲಿ ೨೦೮ ಹುದ್ದೆಗಳನ್ನು ಆರ್ಮಿ , ೪೨ ಹುದ್ದೆಗಳನ್ನು ನೇವಿ ಹಾಗೂ ೭೦ ಹುದ್ದೆಗಳನ್ನು ಏರ್ ಫೋರ್ಸ್ ವಿಭಾಗಕ್ಕೆ ಮೀಸಲಿರಿಸಲಾಗಿದೆ
ನೇವಲ್ ಅಕಾಡೆಮಿ (10+2 Cadet Entry Scheme) ವಿಭಾಗದಲ್ಲಿ ೫೫ ಹುದ್ದೆಗಳಿವೆ ನೇಮಕಾತಿಯ ಅವಶ್ಯಕತೆಗೆ ಅನಿಗುಣವಾಗಿ ಹುದ್ದೆಯಲ್ಲಿ ಬದಲಾವಣೆಆಗುವ ಸಾಧ್ಯತೆಗಳಿವೆ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ವಿಭಾಗಕ್ಕೆ ಸೇರಲಿಚ್ಛಿಸುವ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಲಯದಿಂದ ಪಡೆದುಕೊಂಡಿರಬೇಕು
ಏರ್‌ಫೋರ್ಸ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ನೇವಲ್ ವಿಭಾಗಕ್ಕೆ ಅಭ್ಯರ್ಥಿಯು ದ್ವಿತೀಯ ಪಿ.ಯು.ಸಿಯಲ್ಲಿ ಫಿಝಿಕ್ಸ್ ಮತ್ತು ಮೆಥಮೆಟಿಕ್ಸ್ ಅನ್ನು ಒಂದು ಕಲಿಕಾ ವಿಷಯವನ್ನಾಗಿ ಆಯ್ದುಕೊಂಡಿರಬೇಕು ಅಥವಾ ದ್ವಿತೀಯ ಪಿ.ಯು.ಸಿ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ : ರೂ 1೦೦/- ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಯಾವುದೇ ಶಾಖೆಗೆ ಆನ್‌ಲೈನ್ ಅರ್ಜಿಸಲ್ಲಿಸಿದ ಬಳಿಕ ದೊರೆಯುವ ಚಲನ್ ಮೂಲಕ ಪಾವತಿಸಲು ಅವಕಾಶವಿದೆ (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ)

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ   29-01-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.