ಸುಳ್ಯ ಜ್ಞಾನದೀಪದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ದಾರಿದೀಪ-೨೦೧೬

ಸುಳ್ಯದ ಶ್ರೀ ಹರಿ ವಾಣಿಜ್ಯ ಸಂಕೀರ್ಣ ಮತ್ತು ಬೆಳ್ಳಾರೆಯ ಬಸ್ ನಿಲ್ದಾಣದ ಬಳಿ ಕಾರ್ಯ ನಿರ್ವಹಿ ಸುತ್ತಿರುವ ಜ್ಞಾನದೀಪ ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ೨೦೧೬ನೇ ಮಾರ್ಚ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗೆ ಮಕ್ಕಳನ್ನು ಅಣಿ ಗೊಳಿಸುವ ವಿಶೇಷ ತರಬೇತಿ ಶಿಬಿರ ದಾರಿದೀಪ-೨೦೧೬ ಜನವರಿ ಮೊದಲ ವಾರದಿಂದ ಆರಂಭಗೊಳ್ಳಲಿದೆ. ತರಬೇತಿ ಶಿಬಿರವು ವಾರದ ಪ್ರತಿ ಶನಿವಾರ ಅಪರಾಹ್ನ ೨.೦೦ಗಂಟೆಯಿಂದ, ಆದಿತ್ಯವಾರ ಬೆಳಿಗ್ಗೆ ೯.೩೦ ರಿಂದ ೩.೩೦ ಹಾಗೂ ರಜಾ ದಿನಗಳಲ್ಲಿ ತರಗತಿಗಳು ನಡೆಯಲಿದೆ. ಈ ವಿಶೇಷ ತರಬೇತಿ ಶಿಬಿರವನ್ನು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂ ದಿಗೆ ಉತ್ತೀರ್ಣರಾಗುವ ಉದ್ದೇಶದಿಂದ ಆರಂಭಿಸಲಾಗಿದೆ. ತರಬೇತಿ ಶಿಬಿರವು ಪರೀಕ್ಷೆ ಮುಗಿಯುವ ದಿನದವರೆಗೆ ನಡೆಯಲಿದೆ. ೨೦೧೫-೧೬ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯು ತ್ತಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಅನುಭವಿ ಉಪನ್ಯಾಸಕರುಗಳಿಂದ ಬೋಧನೆ ಸೇರಿದಂತೆ ವಿದ್ಯಾರ್ಥಿಗಳ ಸ್ಮರಣ ಶಕ್ತಿ ವೃದ್ಧಿಸಲು ವಿವಿಧ ತರಬೇತಿಗಳೊಂದಿಗೆ ತರಗತಿಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳ ಪರೀಕ್ಷಾ ಭಯವನ್ನು ಹೋಗಲಾಡಿಸಲು ಪರೀಕ್ಷಾ ಪೂರ್ವ ತರಬೇತಿ ಸೇರಿದಂತೆ ಯೋಗ ತರಗತಿಗಳನ್ನೂ ಡಲಾಗುವುದು. ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಕಳೆದ ಏಳು ವರ್ಷಗಳಿಂದ ಪರೀಕ್ಷಾ ಪೂರ್ವ ತರಗತಿ ನೀಡಲಾಗುತ್ತಿದ್ದು ಸಂಸ್ಥೆ ಪ್ರತೀ ವರ್ಷವೂ ಶೇ.೧೦೦ ಫಲಿತಾಂಶ ದಾಖಲಿಸಿದೆ. ಈ ವರ್ಷ ತರಬೇತಿ ಶಿಬಿರಕ್ಕೆ ಹೊಸ ರೂಪ ನೀಡಲಾಗಿದ್ದು, ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ತಾಲೂಕಿನ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ತರಬೇತಿಯು ದಾರಿದೀಪವಾಗಲಿದೆ. ಆಸಕ್ತರು ತಕ್ಷಣ ಸಂಸ್ಥೆಯ ಕಛೇರಿಯಲ್ಲಿ ಹೆಸರು ನೋಂದಾಯಿಸಬೇಕೆಂದು ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.