ಸುಂದರ, ಸಾರ್ಥಕ ಬದುಕಿಗೆ ಸರಳ ಹಾಗೂ ಪ್ರಭಾವೀ ಸೂತ್ರಗಳು

ಜಗತ್ತಿಗೆ ನೀವು ಸುಂದರವಾಗಿ ಕಾಣಿಸುವುದು ನೀವು ನಿಮ್ಮನ್ನು ಇತರರ ಸೇವೆಗಳಿಗಾಗಿ ಅರ್ಪಿಸಿಕೊಂಡಾಗ ಮಾತ್ರ – ಗಾಂಧೀಜಿ
ಸಣ್ಣ ಸಣ್ಣ ಮಾನವೀಯತಾ ಕಾರ್ಯಗಳು ಪರಿಣಾಮಕಾರಿ ಸೇವೆಯಾಗಬಲ್ಲದು, ಸನ್ನಡತೆ, ಧೈನ್ಯತೆಯ ಮಾತು, ಇತರರಿಗೆ ಸಹಾಯ ಹಸ್ತ ಚಾಚುವುದು, ಅನಾವಶ್ಯಕ ಇತರರ ಮನ ನೋಯಿಸದಿರುವುದು, ಇತರರ ಬಗ್ಗೆ ಋಣಾತ್ಮಕವಾಗಿ ಮಾತನಾಡದಿರುವುದು, ನಮ್ಮಲ್ಲಿರುವುದನ್ನು ಇತರರಿಗೆ ನೀಡುವಂತ ಕಾರ್ಯಗಳು ಜೀವನದಲ್ಲಿ ದೊಡ್ಡ ಛಾಪು (Iಟಿಠಿಡಿiಟಿಣ) ಮೂಡಿಸಿ ನಿಮ್ಮನ್ನು ಇತರರಿಂದ ಪ್ರತ್ಯೇಕಿಸಬಹುದು. ಜೀವನದಲ್ಲಿ ಧನಾತ್ಮಕ ಛಾಪನ್ನು ಮೂಡಿಸುವ ಕೆಲವು ಸರಳ ಹಾಗೂ ಪ್ರಭಾವೀ ಸೂತ್ರಗಳು ಇಂತಿವೆ.
* ಸಮಸ್ಯೆಗಳನ್ನು ಹುಟ್ಟು ಹಾಕುವವರಾಗಬೇಡಿ. ಬದಲಾಗಿ ಪರಿಹಾರ ನೀಡುವವರಾಗಿ, ಕನಿಷ್ಟ ಪಕ್ಷ ಹೇಗೆ ಎಲ್ಲಿ ಪರಿಹಾರ ಸಿಗಬಹುದೆಂದಾದರೂ ತಿಳಿಸುವವರಾಗಿ.
* ನಾನು ನಿಮಗೆ ಸಹಾಯ ಮಾಡಲೇ? ಈ ಮಾತು ನೀವು ಇತರ ಜೀವನದ ಬೆಲೆ ತಿಳಿದಿರುತ್ತೀರಿ ಎಂದರ್ಥ. ನಿಮ್ಮದು ನೀಡುವ ಕೈಯಾಗಿರಲಿ, ಚಾಚುವ ಕೈಯಾಗದಿರಲಿ. ಈ ನಿಟ್ಟಿನಲ್ಲಿ ಜೀವನದಲ್ಲಿ ಪ್ರಾಮಾಣಿಕ ಆರ್ಥಿಕ ಪೂರ್ವಸಿದ್ಧತೆ (ಈiಟಿಚಿಛಿiಟಿಚಿಟ ಠಿಟಚಿiಟಿg) ಪ್ರಾರಂಭಿಸಿ. * ಸಂದರ್ಭಕ್ಕೆ ತಕ್ಕಂತೆ ಉಡುಗೆ ತೊಡುಗೆಯಿರಲಿ ನಿಮ್ಮ ಮುಖದಲ್ಲಿ ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ ಮಂದಹಾಸವಿರಲಿ. ಇದು ನಿಮ್ಮನ್ನು ಜನರೊಂದಿಗೆ ಬೆರೆಸುವ ಸೇತುವೆ. * ವೈಯುಕ್ತಿಕ ಹಾಗೂ ಸಾಂಘಿಕ ಜೀವನದಲ್ಲಿ ನಿಮ್ಮ ಪ್ರಾಮಾಣಿಕತೆ, ನಿಷ್ಟೆ ಹಾಗೂ ನಡತೆ ಅತೀ ಎತ್ತರದ ಸ್ತರದಲ್ಲಿರಲಿ. * ಸಮಾಜಕ್ಕೆ ನಿಮ್ಮ ಕೊಡುಗೆ ನೀವು ಪಡೆದುಕೊಂಡುದಕ್ಕಿಂತ ಹೆಚ್ಚಿರಲಿ * ನಿಮಗೆ ಗೋಚರಿಸಿದ, ಇತರರು ಗೋಚರಿಸದ ತುರ್ತು ವಿಷಯಗಳನ್ನು ಎಲ್ಲರ ಗಮನಕ್ಕೆ ತನ್ನಿ. * ಸಮಯ ಪ್ರಜ್ಞೆ ಇರಲಿ. ಕೊಟ್ಟ ವಚನವನ್ನು ತಪ್ಪಬೇಡಿ, ವಹಿಸಿದ ಕಾರ್ಯಗಳನ್ನು ಮರೆಯಬೇಡಿ, ನಿಮ್ಮ ನಿರ್ಧಾರಗಳನ್ನು ಸಂಭಂದಿಸಿದವರಿಗೆ ಕೂಡಲೇ ತಿಳಿಸಿ ತಡಬೇಡ. ಇತರರ ಮನ ನೋಯಿಸುವ ಹಕ್ಕು ನಿಮಗಿಲ್ಲ, ಇತರರಿಗೆ ನೋವು ನೀಡದಂತೆ ಬದುಕಿದರೆ ಅದುವೇ ಧನ್ಯತೆ ತಿಳಿದಿರಲಿ. * ನೀವು ಇತರರಿಂದ ಯಾವ ರೀತಿಯ ವರ್ತನೆಯನ್ನು ಅಪೇಕ್ಷಿಸುತ್ತೀರೋ ನೀವು ಸಹಾ ಜನರೊಂದಿಗೆ ಅದೇ ರೀತಿ ವರ್ತಿಸಿ. * ಕೆಲಸಗಳನ್ನು ಎಲ್ಲರಿಗೂ ಹಂಚಿ (ಆeಟegಚಿಣe) ಜನರನ್ನು ಶಕ್ತಿ ಶಾಲಿಗಳನ್ನಾಗಿ ಮಾಡಿ. ಸರ್ವಾಧಿಕಾರಿ, ಅಹಂ ಬ್ರಹ್ಮಾಸ್ಮಿ ಮನೋಭಾವಬೇಡ. * ಸಭೆ, ಚರ್ಚಾಕೂಟ, ವಿಚಾರ ವಿಮರ್ಶೆಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಅಗತ್ಯವಾಗಿ ಚರ್ಚೆಗೆ ತನ್ನಿ, ಧನಾತ್ಮಕ ವಿಚಾರಗಳನ್ನು ಪಕ್ಷ ಭೇದ ಮರೆತು ಸ್ವಾಗತಿಸಿ. ಋಣಾತ್ಮಕ ವಿಚಾರಗಳನ್ನು ಟಿಪ್ಪಣಿಗಾರನ ದೃಷ್ಟಿ ಕೋನದಿಂದ ನೋಡುವುದು ಅವಶ್ಯ. ಕೇವಲ ವೈಯುಕ್ತಿಕ ಪ್ರತಿಷ್ಟೆಗಾಗಿ ಮಾತನಾಡಬೇಡಿ. ಗುಣಾತ್ಮಕ ವಿಚಾರಗಳಿದ್ದರೆ ಮಾತನಾಡದಿರಬೇಡಿ. ಇತರರ ವೈಯುಕ್ತಿಕ ಜೀವನದ ಬಗ್ಗೆ ಕುತೂಹಲ ಹಾಗೂ ಅನಾವಶ್ಯಕ ಟೀಕೆ ಬೇಡ. ಇದರಿಂದ ನಿಮ್ಮ ಅಮೂಲ್ಯ ಸಮಯವ್ಯರ್ಥ. ಯಾವುದೇ ಸಂದರ್ಭದಲ್ಲಿ ಕಟ್ಟಕಡೆಯ ಪರಿಣಾಮ ಎಲ್ಲರಿಗೂ ಗೆಲುವಾಗಿರಲಿ (Wiಟಿ ತಿiಟಿ siಣuಚಿಣioಟಿ )
* ಯಾವುದೇ ವ್ಯಕ್ತಿಯನ್ನು ಭೇಟಿಯಾದಾಗ ಪ್ರಥಮ ೩೦ ಸೆಕೆಂಡ್‌ಗಳನ್ನು ಆವ್ಯಕ್ತಿಯ ಗುಣಾತ್ಮಕ ವಿಶೇಷತೆ, ವೈಯಕ್ತಿಕ ಸಾಥನೆಗಳೊಂದಿಗೆ ಮಾತುಕತೆ ಆರಂಭಿಸಿ, ಸಮಾಜದಲ್ಲಿ ಆ ವ್ಯಕ್ತಿಯ ಇರುವಿಕೆ ಗುರುತಿಸಿದಂತಾಗಲಿ. * ಉತ್ತಮ ಕೇಳುಗರಾಗಿ, ಮೌನವಾಗಿ, ಅಡೆತಡೆಯಿಲ್ಲದೆ (ಉooಜ ಟisಣeಟಿeಡಿ) ಜನರೊಂದಿಗೆ ಬೆರೆತಾಗ ಕಣ್ಣುಗಳು ಪರಸ್ಪರ ಮಾತನಾಡುತ್ತಿರಲಿ, ಕೇಳುತ್ತಿರಲಿ, ಕಣ್ಣುಗಳು ನಮ್ಮ ಆತ್ಮದ ಕಿಟಿಕಿಗಳು ಎಂದು ತಿಳಿದಿರಲಿ, ಜನರತ್ತ ಮಾತನಾಡಬೇಡಿ ಜನರೊಂದಿಗೆ ಮಾತನಾಡಿ. * ಮಾತು ನಮ್ಮ ವ್ಯಕ್ತಿತ್ವದ ಮುಖ್ಯ ಅಂಗ. ಬಾಹ್ಯ ಸೌಂದರ್ಯ ಹಲವು ಜನರನ್ನು ಆಕರ್ಷಿಸಬಹುದು. ಆದರೆ ಅನೇಕ ಹೃದಯಗಳನ್ನು ಗೆಲ್ಲುವ ಸಾಮರ್ಥ್ಯ ಇರುವುದು ಮಾತಿಗೆ ಮಾತ್ರ. ಸಭೆ ಸಮಾರಂಭಗಳಲ್ಲಿ ಮಾತನಾಡಲು ಅವಕಾಶ ಸಿಕ್ಕಿದಾಗ ಅವಕಾಶಗಳನ್ನು ಕೈಚೆಲ್ಲಬೇಡಿ. ಆದರೆ ನಮ್ಮ ಮಾತುಗಳನ್ನು ನಿಗದಿತ ಸಮಯದಲ್ಲಿ ಯಾ ಅದಕ್ಕೂ ಮುಂಚಿತವಾಗಿ ಮುಗಿಸಿ ಬಿಡಿ. ನಿರಂತರ ೩೦ ನಿಮಿಷದ ನಂತರ ಕೇಳುಗರು ತನ್ನ ಕಿವಿಗಳನ್ನು ಆಫ್ ಮಾಡುವುದು ಸಾಮಾನ್ಯ. ನಮ್ಮ ದೇಶದಲ್ಲಿ ಪೂರೈಕೆ ಜಾಸ್ತಿ, ಬೇಡಿಕೆ ಕಡಿಮೆ ಇರುವ ವಸ್ತು ಭಾಷಣವೊಂದೇ ತಿಳಿದಿರಲಿ (Suಠಿಠಿಟಥಿ exಛಿeeಜs ಜemಚಿಟಿಜ)
* ನಿಮ್ಮ ಯಶಸ್ವಿನ ಹಿಂದೆ ಸಮಾಜದ ಕೊಡುಗೆಯಿದೆ ನೆನಪಿರಲಿ. ಯಶಸ್ಸು ವೈಯುಕ್ತಿಕ ಸಾಧನೆಯಲ್ಲ ತಂಡದ ಸರ್ವಾಂಗೀಣ ಸಾಧನೆ ಮರೆಯಬೇಡಿ. (Suಛಿಛಿess is ಚಿ ಣeಚಿm eಜಿಜಿoಡಿಣ) ವೈಯುಕ್ತಿಕ ಒಳಿತಿನೊಂದಿಗೆ ಸಮಾಜದ ಒಳಿತಿಗಾಗಿ ಕನಸು ಕಾಣುವವರಾಗಿ.
* ಯಾವುದೇ, ಹೊಸ ವಿಚಾರಗಳು ಒಂದಾಗ, ನೋಡಿದಾಗ, ಕೇಳಿದಾಗ ಅದನ್ನು ಸಂಭಂದ ಪಟ್ಟವರಿಗೆ ನಿಮ್ಮ ವೈಯುಕ್ತಿಕ ಷರಾದೊಂದಿಗೆ ಕಳುಹಿದ ಹೊಸ ವಿಚಾರಗಳು ಸಮಾಜಕ್ಕೆ ಸಿಗುವಂತಾಗಲಿ.
* ನಿಮ್ಮ ಒಡನಾಡಿಗಳ ಸಂತೋಷದ ಕ್ಷಣಗಳನ್ನು ಮರೆತರೂ ಅವರ ದುಃಖದ ಸಮಯಗಳಲ್ಲಿ ಖಂಡಿತವಾಗಿ ಅವರಿಗೆ ಸಾಥ್ ನೀಡಿ.
* ಜನರ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಕರಿಸಿ ಅಂತೆಯೇ ಅವರ ದೌರ್ಬಲ್ಯಗಳನ್ನು ವೈಯುಕ್ತಿಕವಾಗಿ ಮೃದುವಾಗಿ ತಿಳಿಹೇಳಿ. ಪ್ರಶಂಸೆ ಸಾರ್ವಜನಿಕವಾಗಿರಲಿ. * ನಿಮ್ಮ ವ್ಯಕ್ತಿತ್ವಕ್ಕೆ ಪ್ರತಿ ದಿನವೂ ಮೌಲ್ಯವರ್ಧನೆಯಾಗಲಿ ವ್ಯಕ್ತಿತ್ವ ನಿಂತ ನೀರಾಗದಿರಲಿ. ಕಾಲಕಾಲಕ್ಕೆ ನಿಮ್ಮ ಇರುವಿಕೆಯನ್ನು ಸಮಾಜಕ್ಕೆ ತಿಳಿಸುತ್ತಿರಿ – ನಿಮ್ಮ ಕಾರ್ಯಗಳಿಂದ ನಿಮ್ಮ ಸನ್ನಡತೆಯಿಂದ. ಇಲ್ಲವಾದಲ್ಲಿ ಸಮಾಜ ನಿಮ್ಮ ಇರುವಿಕೆಯನ್ನು ಮರೆತು ಬಿಡಬಹುದು. ನೆನಪಿಡಿ ನಿಮ್ಮ ಸನ್ನಡತೆಯನ್ನು ಸಮಾಜ ದೌರ್ಬಲ್ಯವೆಂದು ತಿಳಿಯಲು ಖಂಡಿತ ಆಸ್ಪದ ಕೊಡಬೇಡಿ. * ಪ್ರಚಾರವನ್ನು ಹಿಂಬಾಲಿಸಬೇಡಿ ಪ್ರಚಾರ ನಿಮ್ಮನ್ನು ಹಿಂಬಾಲಿಸಲಿ ನಿಮ್ಮ ಕಾರ್ಯಗಳಿಂದ. ಬದುಕಿನ ಸಾರ್ಥಕತೆ, ಐಶ್ವರ್ಯ, ಆಡಂಭರ, ಪ್ರಚಾರದಲ್ಲಿ ಅಡಗಿಲ್ಲ ಬದಲಿಗೆ ನಿರ್ಮಲ ಅಂತಕರಣದಿಂದ ಮೂಡುವ ನಿಸ್ವಾರ್ಥ ಸೇವೆಗಳಲ್ಲಿದೆ. * ಪರಿಪೂರ್ಣತೆ ವ್ಯಕ್ತಿಯಲ್ಲಿರಲು ಅಸಾಧ್ಯ. ಅದನ್ನು ಅಪೇಕ್ಷಿಸುವುದು ಮೂರ್ಖತನ ಆದ್ದರಿಂದ ವ್ಯಕ್ತಿಯ ಋಣಾತ್ಮಕ ನಡೆಗಳನ್ನು ಬದಿಗಿಟ್ಟು ಗುಣಾತ್ಮಕ ನಡೆಗಳ ಬಗ್ಗೆ ಚರ್ಚೆಯಾಗಲಿ. ಈ ಮೂಲಕ ಗುಣಾತ್ಮಕ ಚಿಂತನೆಗಳ ಸಮಾಜಕ್ಕೆ ಪಸರಿಸುವಂತಾಗಲಿ. * ಆತ್ಮ ಸಾಕ್ಷಿಯಂತೆ ಕೆಲಸ ಮಾಡಿದಾಗ ಬರುವ ಟೀಕಾಕಾರರ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಫಲಭರಿತ ಉತ್ತಮ ಮಾವಿನ ಮರ ಹೆಚ್ಚಾನ ಕಲ್ಲೆಸತಕ್ಕೆ ಗುರಿಯಾಗುತ್ತದೆ. ಕಾಸರಕನ ಮರವಲ್ಲ! ಗುಡಿಯ ಗಂಟೆ ನಿಲ್ಲಬಹುದು ಈ ನಾಲಗೆಯಲ್ಲ! ಇದು ಪ್ರಕೃತಿ ನಿಯಮ. ಜನರು, ಸನ್ನಿವೇಶ, ವ್ಯವಸ್ಥೆಗಳ ಬಗ್ಗೆ ಚಿಂತಿಸಬೇಡಿ. ನಿಮ್ಮ ಪ್ರತಿಕ್ರಿಯೆಯಿಲ್ಲದಿದ್ದರೆ ಇವೆಲ್ಲವೂ ಶಕ್ತಿಹೀನ. * ಪ್ರತಿದಿನವೂ ನಮ್ಮ ಜೀವನದ ಅಂತಿಮ ದಿನವೆಂದೇ ಜೀವಿಸಿ. ಕಟ್ಟ ಕಡೆಗೆ ಒರತಿಯೊಬ್ಬರೂ ಇಚ್ಛಿಸುವುದು ಅವರ ಸಮಾಧಿ ಲೇಖದಲ್ಲಿ. ಈ ಶಬ್ಧಗಳನ್ನು ಐIಈಇ Wಇಐಐ ಐIಗಿಇಆ
ಓo bಚಿಜಥಿ ಛಿಚಿಟಿ go bಚಿಛಿಞ ಚಿಟಿಜ sಣಚಿಡಿಣ ಚಿ ಟಿeತಿ begiಟಿಟಿiಟಿg . ಃuಣ ಚಿಟಿಥಿ oಟಿe ಛಿಚಿಟಿ sಣಚಿಡಿಣ ಣoಜಚಿಥಿ ಚಿಟಿಜ mಚಿಞeಚಿ ಟಿeತಿ eಟಿಜiಟಿgs. (ಭೂತಕಾಲಕ್ಕೆ ಹಿಂದಿರುಗಿ ಯಾರಿಂದಲೂ ತಮ್ಮ ಜೀವನಕ್ಕೆ ಹೊಸ ಆರಂಭ ನೀಡಲು ಆಸಾಧ್ಯ. ಆದರೆ ವರ್ತಮಾನದಲ್ಲಿ ಆರಂಭಿಸಿ ಭವಿಷ್ಯದಲ್ಲಿ ಬದುಕಿಗೆ ಹೊಸ ಅಂತ್ಯ ನೀಡಲು ಪ್ರತಿಯೊಬ್ಬನಿಗೂ ಸಾಧ್ಯ. )
ಆಂಗ್ಲ ಸಾಹಿತಿ ಮರಿಯಾರೋಟಿಸನ್ ಈ ಮಾತು ಇಂದಿಗೆ ಅತೀ ಪ್ರಸ್ತುತ ಅನಿಸುವುದಿಲ್ಲವೇ?

– ಕೆ.ಆರ್. ಮನಮೋಹನ್, ಸುಳ್ಯ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.