ಶ್ರೀಮತಿ ಶೋಭಾ ಚೂಂತಾರುರವರಿಗೆ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ

Advt_NewsUnder_1
Advt_NewsUnder_1

krushi ma copy KRUSHI 3 copy
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಆಶ್ರಯದಲ್ಲಿ ಆ.3 ರಂದು ಶಿವಮೊಗ್ಗದಲ್ಲಿ ಜರುಗಿದ ಕೃಷಿ ಮೇಳದಲ್ಲಿ ಸುಳ್ಯ ತಾಲೂಕು ಅಮರ ಪಡ್ನೂರು ಗ್ರಾಮದ ರೈತ ಮಹಿಳೆ ಶ್ರೀಮತಿ ಶೋಭಾ ಅಶೋಕ್ ಚೂಂತಾರುರವರನ್ನು ಕರ್ನಾಟಕ ಸರ್ಕಾದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಜಿಲ್ಲಾ ಮಟ್ಟದ ಪ್ರಗತಿಪರ ರೈತ ಮಹಿಳೆ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ  ಸಚಿವರುಗಳಾದ ಕೃಷ್ಣ ಬೈರೇಗೌಡ, ಎಚ್.ಸಿ.ಮಹದೇವಪ್ಪ, ಡಿ.ಬಿ.ಜಯಚಂದ್ರ, ಡಿ.ಹೆಚ್.ಶಂಕರ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಇವರು ತಮ್ಮ ಕೃಷಿ ಜಮೀನಿನಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿ ಯಶಸ್ವಿಯಾಗಿದ್ದು, ಈ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಮಾಡಿ ಶಿಫಾರಸ್ಸು ಮಾಡಿದ್ದರು.

ಶೋಭಾರವರು ಅಮರ ಪಡ್ನೂರು ಗ್ರಾಮದ ಪ್ರಗತಿ ಪರ ರೈತ ಅಶೋಕ್ ಚೂಂತಾರುರವರ ಪತ್ನಿ ಹಾಗೂ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ದಿ|ಸಿದ್ದಪ್ಪ ಗೌಡ ಗುತ್ತುಮನೆ ಮತ್ತು ಶ್ರೀಮತಿ ಭವಾನಿ ಗುತ್ತು ರವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.