ಸುಳ್ಯ: ಗೃಹ ರಕ್ಷಕ ದಳಕ್ಕೆ ಅರ್ಜಿ ಆಹ್ವಾನ

ಸುಳ್ಯ ಘಟಕದ ಗೃಹರಕ್ಷಕ ದಳಕ್ಕೆ ಆಸಕ್ತ ಯುವಕ, ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಸೆ.30ರವರೆಗೆ ಸಂದರ್ಶನ ನಡೆಯಲಿದೆ ಎಂದು ಘಟನಾಧಿಕಾರಿ ಜಯಂತ ಶೆಟ್ಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
1೦ನೇ ತರಗತಿ ಅಥವಾ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 2೦ ರಿಂದ 35 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಪುರುಷ ಅಭ್ಯರ್ಥಿಗಳು ಕನಿಷ್ಟ 165ಸೆ.ಮೀ ಎತ್ತರ ಇರತಕ್ಕದ್ದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಸಾರಿಗೆ, ಅಬಕಾರಿ, ಜೈಲು, ಅರ್.ಟಿ.ಓ. ಅಗ್ನಿಶಾಮಕದಳ, ಹಾಗೂ ಆರಕ್ಷಕ ಇಲಾಖೆಯಲ್ಲಿ ನಿಯೋಜಿಸಲಾಗುವುದು. ಆಸಕ್ತರು ಅರ್ಜಿಯನ್ನು ಗೃಹ ರಕ್ಷದಳ ಕಛೇರಿ, ಜೂನಿಯರ್ ಕಾಲೇಜು ರಸ್ತೆ ಸುಳ್ಯ ಇಲ್ಲಿಂದ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.