ವಾಲಿಬಾಲ್ ಪಂದ್ಯಾಟ: ಸ್ನೇಹ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೆ.3ರಂದು ಶಾಂತಿನಗರ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಸ್ನೇಹ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಸೆ.15ರಂದು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಸೇವಿತಾ ಪಿ.ಸಿ 7ನೇ, ಕವನ ಎಂ.ವಿ 7ನೇ, ಅನ್ವಿತಾ ಎನ್.ಎನ್ 7ನೇ, ವೈಷ್ಣವಿ ಹೆಚ್.ಎಲ್ 7ನೇ, ವೈಷ್ಣವಿ ಕೆ.ಹೆಚ್ 7ನೇ, ಸುಚಿತ್ರಾ ಪಿ.ಆರ್ 7ನೇ, ಜ್ಞಾನ. ಬಿ 6ನೇ, ಪುಣ್ಯ ಎ.ಕೆ 6ನೇ, ಸಿಂಚನ ಸರಸ್ವತಿ ಬಿ 6ನೇ, ಮಹಿಮಾ ಯು.ಎಸ್ 6ನೇ, ಸ್ವಪ್ನಾ ವಿ.ಎಸ್ 6ನೇ, ನಿತ್ಯಶ್ರೀ.ಜಿ 5ನೇ ಭಾಗವಹಿಸಿದ ವಿದ್ಯಾರ್ಥಿಗಳು. ಇವರಿಗೆ ದೈಹಿಕ ಶಿಕ್ಷಕ ಶೀನ ಉಜಿರೆಯವರು ಮಾರ್ಗದರ್ಶನ ನೀಡಿದ್ದರು.

vallyball-sneha school girls thanda jillamattakke

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.