ಧರ್ಮಸ್ಥಳದಲ್ಲಿ ಗ್ರಾ.ಪಂ. ನೌಕರರ ರಾಜ್ಯ ಮಟ್ಟದ ಸಮಾಲೋಚನಾ ಸಭೆ

Dharmasthala nowkara samalochana sabheಧರ್ಮಸ್ಥಳ : ಕರ್ನಾಟಕ ರಾಜ್ಯ ಗ್ರಾ.ಪಂ. ಗ್ರಾಮ ನೌಕರರ ಸಂಘ (ಆರ್.ಡಿ.ಪಿ.ಆರ್) ರಾಜ್ಯ ಸಮಿತಿಯ ಆಶ್ರಯದಲ್ಲಿ ರಾಜ್ಯ ಮಟ್ಟದ ಗ್ರಾಮ ಪಂಚಾಯತ್ ನೌಕರರ ಕುಂದು ಕೊರತೆ ಮತ್ತು ಸಮಾಲೋಚನಾ ಸಭೆ ಡಿ. 9ರಂದು ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ನೌಕರರ ಬೇಡಿಕೆ ಮತ್ತು ಸಮಸ್ಯೆಗಳು :
1. ಗ್ರಾಮ ಪಂಚಾಯತ್ ನೌಕರರಿಗೆ ನಗರ ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿಗಳಂತೆ ಸೇವಾನಿಯಮಾವಳಿ ಪಂಚಾಯತ್ ರಾಜ್ ಇಲಾಖೆಯಡಿ ರೂಪಿಸಬೇಕು. 2. ವರ್ಗಾವಣೆ ಸವಲತ್ತು ನೀಡಬೇಕು. 3. ವೇತನ ಶ್ರೇಣಿ ಇಲ್ಲದೆ ಕಳೆದ 20 ವರ್ಷ ಸೇವೆ ಸಲ್ಲಿಸಿದ ನೌಕರರಿಗೂ ಈಗ ಸೇರಿದ ನೌಕರರಿಗೂ ಒಂದೇ ರೀತಿಯಲ್ಲಿ ಕನಿಷ್ಠ ವೇತನ ನೀಡುತಿದ್ದು, ಇದು ಅವೈಜ್ಞಾನಿಕ ಪದ್ದತಿಯಾಗಿದ್ದು ಇದರ ಬದಲು ಗ್ರಾಮ ಪಂಚಾಯತ್ ನೌಕರರಿಗೆ ಹುದ್ದೆಗಳ ನ್ವಯ ಸೂಕ್ತ ವೇತನ ಶ್ರೇಣಿ ನಿಗದಿಪಡಿಸಬೇಕು. 4. ೨೦೦೮ ರಲ್ಲಿಯೇ ಭವಿಷ್ಯನಿದಿಯ ಕುರಿತು ಆದೇಶವಾಗಿದ್ದು, ಆದರೆ ಸದ್ರಿ ಆದೇಶ ಆದೇಶವಾ ಗಿಯೇ ಉಳಿದಿದ್ದು ಇಲ್ಲಿಯವರೆಗೂ ಕಾರ್ಯ ರೂಪಕ್ಕೆ ಬರದೆ ಇರುವುದು ಕಳೆದ 9 ವರ್ಷಗಳಿಂದ ಗ್ರಾಮ ಪಂಚಾ ಯತ್ ನೌಕರರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 5. ಸೂಕ್ತ ವೈದ್ಯಕೀಯ ಭದ್ರತೆಯ ಇಎಸ್‌ಐ ಸೌಲಭ್ಯವಿಲ್ಲ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 6. ಕಳೆದ ಹಲವು ವರ್ಷಗಳಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಂಜೂರಾದ ಹುದ್ದೆಗಳಿಗೆ (ಪಂಪುಚಾಲಕ, ನೀರುಗಂಟಿ, ಜವಾನ, ಶುಚಿತ್ವನೌಕರ, ಕರವಸೂಲಿಗಾರ ಮತ್ತು ವಾಹನ ಚಾಲಕ) ಗ್ರಾಮ ಪಂಚಾಯತ್ ಗಳು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಅವರಿಂದ ಕಾರ್ಯ ನಿರ್ವಹಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೂ ಜಿ.ಪಂ. ಅನುಮೋದನೆಯಾಗದೆ ಅತಂತ್ರ ಸ್ಥಿತಿಯಲ್ಲಿದ್ದು, ಸದ್ರಿ ಅನುಮೋದನೆ ಯಾಗದೆ ಇರುವ ಸಿಬ್ಬಂದಿಗಳಿಗೆ ಜಿ.ಪಂ. ಅನುಮೋದನೆ ನೀಡಬೇಕು. ಮತ್ತು ಸದ್ರಿ ಸಿಬ್ಬಂದಿಗಳ ಪೈಕಿ ಹಲವು ಸಿಬ್ಬಂದಿಗಳು ಈಗಾಗಲೇ ವಯೋಮಿತಿ ಮೀರಿದ್ದು ಮತ್ತು ಹಲವು ಸಿಬ್ಬಂದಿಗಳಿಗೆ ವಿದ್ಯಾರ್ಹ ತೆ ಕಡಿಮೆ ಇದ್ದು, ಇಂತಹ ಸಿಬ್ಬಂದಿ ಗಳಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಒಂದು ಸೂಕ್ತ ನಿದರ್ಶನ ಹೊರಡಿಸಿ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು. 7. 2006-07 ನೇ ಸಾಲಿನಿಂದ ಗ್ರಾ.ಪಂ. ಕಚೇರಿಯಲ್ಲಿ ಹುದ್ದೆ ಮಂಜೂರಾಗದೆಯೇ ಅಂದಿನ ದಿನಗಳಲ್ಲಿ ಕಚೇರಿಯಲ್ಲಿ ನುರಿತ ಕಂಪ್ಯೂಟರ್ ಸಾಕ್ಷರತೆ ಹೊಂದಿರುವ ಸಿಬ್ಬಂದಿಗಳು ಇರದ ಕಾರಣ ಎಂ ಜಿ ಎನ್ ಆರ್ ಜಿ ಇ ಎ ಮತ್ತು ಪಂಚತಂತ್ರ ಹಾಗೂ ಇತರ ತಂತ್ರಾಂಶ ಆಧಾರಿತ ಕಂಪ್ಯೂಟರ್ ಮೂಲಕ ಡಾಟ ಎಂಟ್ರೀ ಕಾರ್ಯ ನಿರ್ವಹಿಸಲು ಅಪರೇಟರ್ ಸಿಬ್ಬಂದಿಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ನೇಮಕ ಮಾಡಿಕೊಂಡಿದ್ದು, ಸದ್ರಿ ಸಿಬ್ಬಂದಿಗಳಿಗೆ ಹುದ್ದೆ ಮಂಜೂರಾತಿಯಾಗದೆ ಇರುವ ಕಾರಣ ಸರಕಾರ 2014 ರ ಆದೇಶ ಹೊರಡಿಸುವರೆಗೂ ಯಾವುದೇ ಭದ್ರತೆಯಿಲ್ಲದೆ ಗ್ರಾಮ ಪಂಚಾಯತ್‌ಗಳು ನೀಡುತ್ತಿದ್ದ ಅತ್ಯಂತ ಕಡಿಮೆ ವೇತನದಲ್ಲಿಯೂ ಕಾರ್ಯ ನಿರ್ವಹಿಸಿ ಪಂಚಾಯತ್ ರಾಜ್ ಇಲಾಖೆಯ ತಂತ್ರಾಂಶಗಳ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಸೇವೆ ಸಲ್ಲಿಸಿದ ಸರಿಸುಮಾರು ಶೇ ೫೦ ಸಿಬ್ಬಂದಿಗಳು ಸದ್ರಿ ಆದೇಶದನ್ವಯ ಯಾವ ಪಂಚಾಯತಿನಲ್ಲಿ ಗುಮಾಸ್ತ/ಬೆರಳಚ್ಚುಗಾರ ಹುದ್ದೆ ಖಾಲಿ ಇತ್ತೋ ಅಂತಹ ಪಂಚಾಯತ್ ಗಳಲ್ಲಿ ಪದನಾಮ ಬದಲಾದ ಕ್ಲರ್ಕ್ ಕಮ್ ಡಾಟ ಎಂಟ್ರೀ ಅಪರೇಟರ್ ಹುದ್ದೆಗೆ ಅವರು ಈ ಹಿಂದೆ ಸಲ್ಲಿಸಿದ ಮೂರು ವರ್ಷ ಸೇವೆಗೆ ಪ್ರಥಮ ಆಧ್ಯತೆ ನೀಡಿ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಅವರಿಗೆ ಸೇವಾ ಭದ್ರತೆಯನ್ನು ಸರಕಾರ ಒದಗಿಸಿದ್ದು, ಆದರೆ ಉಳಿದ ಶೇ ೫೦ ಕ್ಕೂ ಅಧಿಕ ಇಂತಹ ಸಿಬ್ಬಂದಿಗಳಿಗೆ ಇನ್ನೂ ಕೂಡ ಸೇವಾ ಭದ್ರತೆ ದೊರಕದೆ ಅತಂತ್ರ ಸ್ಥಿತಿಯಲ್ಲಿದ್ದು ಇಂತಹ ಸಿಬ್ಬಂದಿಗಳಿಗೂ ಈ ಹಿಂದೆ 2014ರ ಆದೇಶದಂತೆ ಅವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಸಹೋದ್ಯೋಗಿಗಳಿಗೆ ಸರಕಾರ ನೀಡಿದ ಸೇವಾ ಭದ್ರತೆಯನ್ನು ನೀಡಬೇಕು. ಸೇರಿಂದತೆ 14 ಬೇಡಿಕೆಗಳನ್ನು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃಧ್ಧಿ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಉದಯ ಶೆಟ್ಟಿ ಪೆರ್ಡೂರು, ದ.ಕ. ಜಿಲ್ಲಾಧ್ಯಕ್ಷೆ ಶ್ರೀಮತಿ ರೋಹಿಣಿ ಶೆಟ್ಟಿ ಕುಕ್ಕೇಡಿ, ಕೋಲಾರ ಜಿಲ್ಲಾ ಪ್ರತಿನಿಧಿ ಯೋಗೀಶ್ ಎಂ ಹುತ್ತೂರು, ಡಾವಣಗೆರೆ ಜಿಲ್ಲಾ ಪ್ರತಿನಿಧಿ ಬಸವರಾಜು, ಮಂಡ್ಯ ಜಿಲ್ಲಾ ಪ್ರತಿನಿಧಿ ಕುಮಾರೇಶ್ ಮಳವಳ್ಳಿ, ಕೊಡಗು ಜಿಲ್ಲಾ ಪ್ರತಿನಿಧಿ ರವೀಂದ್ರ ಸೋಮವಾರಪೇಟೆ, ತುಮಕೂರು ಜಿಲ್ಲಾ ಪ್ರತಿನಿಧಿ ನಾಗರಾಜ್ ಸಿ.ಕೆ.ಪುರ, ವಿಜಾಪುರ ಜಿಲ್ಲಾ ಪ್ರತಿನಿಧಿ ಈರಗಂಟೆಪ್ಪ ಕಲಕೇರಿ, ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಸಾವಿತ್ರಿ ಎಂ ಎಸ್ ಅರಮನೆಕೊಪ್ಪ, ಉತ್ತರ ಕನ್ನಡ ಜಿಲ್ಲಾ ಪ್ರತಿನಿಧಿ ಆನಂದ ಅಂಕೋಲ, ಚಿಕ್ಕಮಗಳೂರು ಜಿಲ್ಲಾ ಪ್ರತಿನಿಧಿ ಚಂದ್ರಶೇಖರ, ಚಿತ್ರದುರ್ಗ ಜಿಲ್ಲಾ ಪ್ರತಿನಿಧಿ ಗುರುಮೂರ್ತಿ, ಹಾಸನ ಜಿಲ್ಲಾ ಪ್ರತಿನಿಧಿ ಲಿಂಗೇಶ್, ಮೈಸೂರು ಜಿಲ್ಲಾ ಪ್ರತಿನಿಧಿ ಮೋಹನ್ ಸಿ, ಹಾವೇರಿ ಜಿಲ್ಲಾ ಪ್ರತಿನಿಧಿ ಪ್ರಶಾಂತ್ ಪಿ ಜೋಶಿ ಕಾಗಿನೆಲೆ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಸಮಿತಿಯ ಉಪಾಧ್ಯಕ್ಷ ಕಾಸಿಂ ಪದ್ಮುಂಜ ಸ್ವಾಗತಿಸಿ, ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್ ಮುದ್ರಾಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.