ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಐಎಫ್‌ಐ ಪ್ರಶಸ್ತಿ ಪ್ರದಾನ

dharmasthala skdrp ge prasastiಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಆರ್ಥಿಕ ಕ್ಷೇತ್ರದ ಪ್ರಗತಿಗೆ ನೀಡಿದ ಕೊಡುಗೆಯನ್ನು ಮನ್ನಿಸಿ ಆಕ್ಸೆಸ್ ಸಂಸ್ಥೆ ನೀಡಿದ `ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ’ಯನ್ನು ಹೆಗ್ಗಡೆಯವರ ಪರವಾಗಿ ಅವರ ಸಹೋದರ ಡಿ. ಸುರೇಂದ್ರ ಕುಮಾರ್ ಮತ್ತು ಗ್ರಾಮಾಭಿವೃದ್ಧಿಯೋಜನೆಯ ಕಾರ್ಯಕರ್ತರು ಡಿ.11ರಂದು ದೆಹಲಿಯಲ್ಲಿ ಸ್ವೀಕರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿರು ಆರ್ಥಿಕ ವ್ಯವಹಾರದ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ಇನ್‌ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿ ನೀಡಲಾಗಿದೆ. ಅನೇಕ ವಿಭಾಗಗಳಲ್ಲಿ ಸಂಸ್ಥೆಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತದಲ್ಲಿ ಆರ್ಥಿಕ ಸೇರ್ಪಡೆಗೆ ಬೆಂಬಲ ನೀಡುವ ಧೀರ್ಘಕಾಲದ ಕೊಡುಗೆ ನೀಡುವ ವ್ಯಕ್ತಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರನ್ನು ವೈಯಕ್ತಿಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಕಿರು ಆರ್ಥಿಕ ಕ್ಷೇತ್ರದ ಬೆಳವಣಿಗೆ, ಸ್ವಾವಲಂಬನೆ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ವಿಸ್ತರಿಸಿ ಅದನ್ನು ಸ್ಥಿರವಾಗಿಸಿ, ಅಡೆತಡೆಗಳ ಹೊರತಾಗಿಯೂ ಅವಿಶ್ರಾಂತ ಪ್ರಯತ್ನಗಳ ಮೂಲಕ ಸಾಧನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ೨೦೦೯ರಿಂದ ನೀಡಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.