ಬೆಳ್ತಂಗಡಿ : ಮಕ್ಕಳ ಮತ್ತು ಇಎನ್‌ಟಿ ಚಿಕಿತ್ಸಾಲಯದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ENT chikisthalaya subarambaಬೆಳ್ತಂಗಡಿ : ಇಲ್ಲಿನ ಮುಖ್ಯ ರಸ್ತೆಯ ಎಂಆರ್‌ಎಫ್ ಟಯರ್‍ಸ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಡಾ| ಶಿಲ್ಪಾ ಹೆಗಡೆ ಮತ್ತು ಡಾ| ಶ್ರೀಹರ್ಷ ತುಳುಪುಳೆ ಯವರ ಮಕ್ಕಳ ಮತ್ತು ಇಎನ್‌ಟಿ ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭವು ಡಿ.3 ರಂದು ನಡೆಯಿತು.
ಚಿಕಿತ್ಸಾಲಯವನ್ನು ಬೆಳ್ತಂಗಡಿಯ ಹಿರಿಯ ವೈದ್ಯರಾದ ಡಾ| ಟಿ.ಎನ್ ತುಳುಪುಳೆಯವರು ದೀಪಬೆಳಗಿಸಿ ನೆರವೇರಿಸಿ ಶುಭಹಾರೈಸಿದರು.
ಈ ಸಮಾರಂಭದಲ್ಲಿ ಅಳದಂಗಡಿಯ ವೈದ್ಯರಾದ ಡಾ| ಎನ್.ಎಂ ತುಳುಪುಳೆ, ಗೀತಾ ತುಳುಪುಳೆ, ಎಸ್.ಎಂ ತುಳುಪುಳೆ, ನರೇಂದ್ರ ತುಳುಪುಳೆ, ಎಂಆರ್‌ಎಫ್ ಟಯರ್‍ಸ್‌ನ ಪ್ರಕಾಶ್ ತುಳುಪುಳೆ, ಪಲ್ಲವಿ ತುಳುಪುಳೆ, ಅಶ್ಮಿತಾ, ಅಶ್ವಿನ್ ತುಳುಪುಳೆ, ಮತ್ತು ಬಂಧು-ಮಿತ್ರರು ಉಪಸ್ಥಿತರಿದ್ದರು. ಪ್ರತಿ ಆದಿತ್ಯವಾರದಂದು ಡಾ| ಶಿಲ್ಪಾ ಹೆಗಡೆ ಮತ್ತು ಡಾ| ಶ್ರೀಹರ್ಷ ತುಳುಪುಳೆ ಇಬ್ಬರೂ ವೈದ್ಯರು ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ ಗಂಟೆ 2 ರ ತನಕ ಭೇಟಿಗೆ ಲಭ್ಯವಿರುತ್ತಾರೆ. ಹಾಗೂ ಮಕ್ಕಳ ಎಲ್ಲಾ ರೀತಿಯ ವ್ಯಾದಿಗಳ ತಪಾಸಣೆ ಮತ್ತು ಚಿಕಿತ್ಸೆ ಎಲ್ಲಾ ವಿಧದ ರೋಗ ನಿರೋಧಕ ಚುಚ್ಚುಮದ್ದುಗಳನ್ನು ಮಕ್ಕಳಿಗೆ ಕೊಡಲಾಗುವುದು. ಕಿವಿ, ಮೂಗು ಮತ್ತು ಗಂಟಲು ವ್ಯಾದಿಗಳ ಸಮಸ್ಯೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.