HomePage_Banner_
HomePage_Banner_
HomePage_Banner_

ಎಲ್‌ಐಸಿ ಬಂಟ್ವಾಳ ಶಾಖೆಯ ಈ ವರ್ಷದ ಎಮ್‌ಡಿಆರ್‌ಟಿ ಆಗಿ ವಿನ್ಸೆಂಟ್ ಡಿಸೋಜಾ

Advt_NewsUnder_1

Vincent Dsouza1ಬೆಳ್ತಂಗಡಿ : ಭಾರತೀಯ ಜೀವವಿಮಾ ನಿಗಮದಲ್ಲಿ ಕಳೆದ 17 ವರ್ಷಗಳಿಂದ ಪ್ರತಿನಿಧಿಯಾಗಿ ವಿವಿಧ ಹುದ್ದೆಗಳೊಂದಿಗೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಲ| ವಿನ್ಸೆಂಟ್ ಟಿ ಡಿಸೋಜಾ ಅವರು ಈ ಬಾರಿ ಕೂಡ ಸತತ ಐದನೇ ಬಾರಿಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ಉಪಗೃಹ ಶಾಖೆಯಲ್ಲಿ ಪ್ರಥಮ ಎಮ್‌ಡಿಆರ್‌ಟಿ ಆಗಿ ಹೊರಹೊಮ್ಮುವ ಮೂಲಕ ಜೂನ್ ತಿಂಗಳಲ್ಲಿ ಲಾಸ್ ಎಂಜಲೀಸ್ ನಡೆಯುವ ಸಮಾವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಬೆಳ್ತಂಗಡಿ ಉಪಗೃಹ ಶಾಖೆಯ ಶಾಖಾಧಿಕಾರಿ ಯೋಗೇಂದ್ರ ಆರ್.ಡಿ ತಿಳಿಸಿದ್ದಾರೆ.
ಎಲ್‌ಐಸಿ ಚೇರ್‌ಮೆನ್ ಕ್ಲಬ್ ಸದಸ್ಯರಾಗಿ, ಮುಖ್ಯ ವಿಮಾ ಸಲಹೆಗಾರರಾಗಿ, ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ವಿಮಾ ಇನ್ಸೂರೆನ್ಸ್ ಕನ್ಸಲ್ಟೆಂಟ್ ಎನ್ನುವ ನೂತನ ಸಂಪೂರ್ಣ ಕಂಪ್ಯೂಟರೀಕೃತ ಸಂಸ್ಥೆ ಸ್ಥಾಪಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಲಾಯಿಲ ಗ್ರಾಮವನ್ನು ಸತತ ಮೂರು ಬಾರಿಗೆ ಹ್ಯಾಟ್ರಿಕ್ ಆಗಿ ಸಂಪೂರ್ಣ ವಿಮಾ ಗ್ರಾಮ ಎಂಬುದಾಗಿ ಮಾಡಿ ಇದೀಗ ನಾಲ್ಕನೇ ಬಾರಿಗೂ ಘೋಷಣೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ. ಈ ಬಾಬ್ತು ಬಂದಿರುವ ತಲಾ 1 ಲಕ್ಷದಂತೆ ಅನುದಾನವನ್ನು ಪಂಚಾಯತ್ ಮೂಲಕ ಗ್ರಾಮದ ಅಭಿವೃದ್ಧಿಗೆ ಒದಗುವಂತೆ ಮಾಡಿದ್ದಾರೆ.
ಜೊತೆಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಸಹಿತ ಯಾವುದೇ ಕಂಪೆನಿಯ ವಾಹನ ವಿಮೆ, ಸ್ಟಾರ್ ಇನ್ಸೂರೆನ್ಸ್ ಮೂಲಕ ಆರೋಗ್ಯ ವಿಮೆ ಸೇವೆಕೂಡ ದೊರಕಿಸಿಕೊಟ್ಟು ಬಂಟ್ವಾಳ ಶಾಖೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಅತ್ಯುತ್ತಮ ಸಂಘಟಕರೂ ಆಗಿರುವ ಅವರು ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಕೋಶಾಧಿಕಾರಿಯಾಗಿ, ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.