ಸಂತೋಮ್ ಟವರ್‍ಸ್‌ನಲ್ಲಿ `ಏಂಜಲ್ಸ್ ಬ್ಯೂಟಿ ಪಾರ್ಲರ್’ ಶುಭಾರಂಭ ನಗುಮುಖದ ಸೇವೆಯಿಂದ ಉದ್ಯಮ ಯಶಸ್ವಿ: ಶೈಲಶ್ರೀ

Angel beaytiparlourಬೆಳ್ತಂಗಡಿ : ಬೆಳ್ತಂಗಡಿ ಬಸ್‌ನಿಲ್ದಾಣದ ಮುಂಭಾಗದ ಸಂತೋಮ್ ಟವರ್‍ಸ್‌ನಲ್ಲಿ ಹವಾನಿಯಂತ್ರಿತ ಸೇರಿದಂತೆ ಸುಸಜ್ಜಿತ ಸೌಲಭ್ಯವನ್ನು ಒಳಗೊಂಡ ಏಂಜಲ್ಸ್ ಬ್ಯೂಟಿ ಪಾರ್ಲರ್ ಡಿ. 4ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಸ್ಥಳಾಂತರಗೊಂಡ ನೂತನ ಸಂಸ್ಥೆಯನ್ನು ಒಂದು ಮೊಟ್ಟೆ ಕಥೆ ಚಲನಚಿತ್ರದ ಖ್ಯಾತ ನಾಯಕಿ ಶೈಲಶ್ರೀ ಉದ್ಘಾಟಿಸಿ, ಮನುಷ್ಯನಿಗೆ ಸೌಂದರ್ಯ ಮುಖ್ಯ ಪ್ರತಿಯೊಬ್ಬರೂ ಇದನ್ನು ಬಯಸುತ್ತಾರೆ. ಬಾಹ್ಯ ಸೌಂದರ್ಯದಂತೆ ನಮ್ಮ ಆಂತರಿಕ ಸೌಂದರ್ಯವೂ ಉತ್ತಮವಾಗಿರಬೇಕು. ನಮ್ಮ ಕೊರಳಲ್ಲಿ ಬಂಗಾರ ಇಲ್ಲದಿದ್ದರೂ, ಮುಖದಲ್ಲಿನ ನಗು ಇದು ಬಂಗಾರ ಇದ್ದಂತೆ. ಗ್ರಾಹಕರ ಜೊತೆ ನಗುಮುಖದ ಸೇವೆ ಉದ್ಯಮದ ಯಶಸ್ವಿಗೆ ಕಾರಣವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮಾತನಾಡಿ, ಪಲ್ಲವಿರಾಜು, ಶಾಂತಾ ಬಂಗೇರ, ರೇಖಾ ವಿನ್ಸೆಂಟ್ ಇವರ ನಡುವೆ ಗುರು ಶಿಷ್ಯರ ಸಂಬಂಧವಿದೆ. ಗುರುಗಳನ್ನು ಗೌರವಿಸುವ ಮೂಲಕ ರೇಖಾ ಅವರು ತಮ್ಮ ಉದಾರತೆಯನ್ನು ಮೆರೆದಿದ್ದಾರೆ. ಬ್ಯೂಟಿ ಪಾರ್ಲರ್ ಎಂಬುದು ನಮ್ಮ ಸೌಂದರ್ಯವನ್ನು ಮಾತ್ರ ಉತ್ತಮ ಪಡಿಸುವ ಕಾರ್ಯ ಮಾಡುವುದಲ್ಲ, ಜೊತೆಗೆ ನಮ್ಮ ಆರೋಗ್ಯದ ಹಿತದೃಷ್ಟಿಯಲ್ಲೂ ಕೆಲಸ ಮಾಡುತ್ತದೆ. ಇಲ್ಲಿ ದೊರೆಯುವ ಮಸಾಜ್‌ಗಳಿಂದ ಅನೇಕ ಕಾಯಿಲೆಗಳು, ಶರೀರದ ನೋವುಗಳು ಗುಣವಾಗುತ್ತದೆ ಎಂದು ಹೇಳಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಭಾರತೀಯ ಮಾನವ ಹಕ್ಕುಗಳ ಸಮಿತಿ ರಾಷ್ಟ್ರಾಧ್ಯಕ್ಷರಾದ ರಾಬರ್ಟ್ ಡಿ’ಸೋಜಾ ಮಾತನಾಡಿ ಇಂದು ಬ್ಯೂಟಿಷಿಯನ್ ತರಬೇತಿ ಪಡೆದವರಿಗೆ ಹೆಚ್ಚಿನ ಬೇಡಿಕೆಯಿದ್ದು, ತರಬೇತಿ ಪಡೆದವರು ಹೆಚ್ಚು ಸಂಪಾದನೆಗೆ ವಿದೇಶಗಳಿಗೆ ಹೋಗುತ್ತಾರೆ. ಆದರೆ ರೇಖಾ ವಿನ್ಸೆಂಟ್ ಲೋಬೊ ಅವರು ಊರಿನಲ್ಲೇ ಜನರ ಅನುಕೂಲಕ್ಕಾಗಿ ಸಂಸ್ಥೆಯನ್ನು ತೆರೆದಿರುವುದು ಅವರ ಧೈರ್ಯವನ್ನು ಮೆಚ್ಚಬೇಕಾಗಿದೆ ಎಂದರು. ಮಂಗಳೂರು ಬ್ಯೂಟಿಷಿಯನ್ ಎಸೋಸಿ ಯೇಶನ್ ಜಿಲ್ಲಾಧ್ಯಕ್ಷೆ ಬಬಿತಾ ಯು. ಶೆಟ್ಟಿ ಅವರು ಮಾತನಾಡಿ ಸೌಂದರ್ಯ ಎನ್ನುವುದು ದೇವರು ಕೊಟ್ಟ ವರ. ಬ್ಯೂಟಿ ಪಾರ್ಲರ್‌ನಲ್ಲಿ ಸೌಂದರ್ಯವನ್ನು ಬದಲಾಯಿಸಲು ಆಗುವುದಿಲ್ಲ, ಅವರ ದೇಹಕ್ಕೆ ಅನುಗುಣವಾಗಿ ಇರುವ ಸೌಂದರ್ಯವನ್ನು ಹೆಚ್ಚಿಸಲು ಸಾಧ್ಯವಿದೆ. ಸಂಸ್ಥೆಗಳಲ್ಲಿ ಗ್ರಾಹಕರ ನಡುವೆ ಪ್ರೀತಿಯಿಂದ ವ್ಯವಹರಿಸಿದಾಗ ಉನ್ನತಿ ಸಾಧ್ಯವಿದೆ ಎಂದರು.
ಬ್ಯೂಟಿಪಾರ್ಲರ್ ಎಸೋಸಿಯೇಶನ್ ತಾಲೂಕು ಅಧ್ಯಕ್ಷೆ ಪಲ್ಲವಿರಾಜು ಅವರು ತಾನೂ ಬ್ಯೂಟಿಷಿಯನ್ ಬಗ್ಗೆ ಹಲವಾರು ತರಬೇತಿಗಳನ್ನು ನೀಡಿದ್ದೇನೆ. ನೂರಾರು ಮಂದಿ ತರಬೇತಿ ಪಡೆದ ವರಲ್ಲಿ ಅನೇಕ ಮಂದಿ ಸ್ವಂತ ಉದ್ಯೋಗವನ್ನು ಮಾಡಿದ್ದಾರೆ. ಇಂತಹ ಸಂಸ್ಥೆಗಳಿಗೆ ಜನರ ಪ್ರೋತ್ಸಾಹ ಅಗತ್ಯ ಎಂದರು. ತುಳು ಚಲನ ಚಿತ್ರ ನಟಿ ನವ್ಯ ಪೂಜಾರಿ ನೂತನ ಸಂಸ್ಥೆಗೆ ಶುಭ ಕೋರಿದರು.ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್‌ನ ಸಹಾಯಕ ಧರ್ಮಗುರು ಫಾ| ಅನಿಲ್ ಪ್ರಕಾಶ್ ಡಿ’ಸೋಜಾ ಆಶೀರ್ವಚನ ವಿಧಿ ನೆರವೇರಿ ಸಿದರು. ಕಾರ್ಯಕ್ರಮದಲ್ಲಿ ಡಿಕೆಆರ್‌ಡಿಎಸ್‌ನ ನಿರ್ದೇಶಕ ಫಾ| ಜೋಸ್ ಆಯಂಗುಡಿ, ಫಾ| ಸಲೀಂ ಜೋಸೆಫ್, ನ.ಪಂ. ಸದಸ್ಯ ಸಂತೋಷ್ ಕುಮಾರ್ ಜೈನ್ ಮೊದಲಾದವರು ಉಪಸ್ಥಿತರಿ ದ್ದರು. ಸಂಸ್ಥೆಯ ಮಾಲಕಿ ಶ್ರೀಮತಿ ರೇಖಾ ವಿನ್ಸೆಂಟ್ ಲೋಬೊ ಸ್ವಾಗತಿಸಿದರು. ವಿಜಯ ಕುಮಾರ್ ನಾವರ ಕಾರ್ಯಕ್ರಮ ನಿರೂಪಿಸಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಾರ್ಕೇಟಿಂಗ್ ಮೆನೇಜರ್ ವಿನ್ಸೆಂಟ್ ಲೋಬೋ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.